tribe ಟ್ರೈಬ್‍
ನಾಮವಾಚಕ
  1. ಬಉಡಕಟ್ಟು; ಬಣ; ಕುಲ; ವಿಶಿಷ್ಟ ನಾಯಕನನ್ನುಳ್ಳ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಯಾ ರಕ್ತಸಂಬಂಧದಿಂದ ಪರಸ್ಪರ ಸೇರಿಕೊಂಡಿರುವ, ಸಾಮಾನ್ಯವಾಗಿ ಒಂದೇ ಸಂಸ್ಕೃತಿ ಮತ್ತು ಒಂದೇ ಪ್ರಾಂತಭಾಷೆ ಹೊಂದಿರುವ, ಅನಾಗರಿಕ ಜನರ, ಕುಟುಂಬಗಳ ಯಾ ಮನೆತನಗಳ ತಂಡ.
  2. ಅದೇ ರೀತಿಯ ಯಾವುದೇ ಸ್ವಾಭಾವಿಕ ಯಾ ರಾಜಕೀಯ ವಿಭಾಗ.
  3. (ರೋಮನ್‍ ಚರಿತ್ರೆ)(ಮೊದಲು ಮೂರು ಇದ್ದು, ಕ್ರಮೇಣ ಮೂವತ್ತೈದು ಆದ) ರಾಜಕೀಯ ಪಂಗಡ, ವರ್ಗ.
  4. (ಒಬ್ಬ ಮೂಲ ಪುರುಷನಿಂದ ಬಂದ) ಸಂತತಿ; ಗೋತ್ರ; ಸಂತತಿಯವರ ಗುಂಪು.
  5. ಇಸ್ರೇಲರ 12 ಪಂಗಡಗಳಲ್ಲೊಂದು.
  6. (ಜೀವವಿಜ್ಞಾನ) ಸಸ್ಯಗಳ ಯಾ ಪ್ರಾಣಿಗಳ ಪಂಗಡ; ಕುಲ ಮತ್ತು ಉಪವಂಶದ ನಡುವಿನ ವರ್ಗ.
  7. (ಬಹುವಚನದಲ್ಲಿ) ದೊಡ್ಡ ಹಿಂಡು, ಗುಂಪು.
  8. (ಸಾಮಾನ್ಯವಾಗಿ ಹೀನಾರ್ಥಕ ಪ್ರಯೋಗ) (ಒಂದೇ ಕುಟುಂಬದ ಯಾ ಕಸಬಿನ) ಜನ–ವರ್ಗ, ತಂಡ: the whole tribe of actors ಸಮಗ್ರ ನವರ್ಗದವರು.
ಪದಗುಚ್ಛ
  1. the Lost Tribes ಷಾನ್ಮನೀಸರ್‍ ದೊರೆಯಿಂದ ಗಡೀಪಾರಾದ ಇಸ್ರೇಲಿನ ಹತ್ತು ಗೋತ್ರಗಳವರು.
  2. the scribbling tribe (ಕೆಲಸಕ್ಕೆ ಬಾರದುದನ್ನು ಬರೆಯುವ) ಲೇಖಕರ ತಂಡ; ಗೀಚುಗ ಕುಲ; ಮನಸ್ವಿ ಗೀಚುವವರ ಗುಂಪು.
  3. the Ten Tribes (ಇಸ್ರೇಲಿಗಳ ಜೂಡಾ ಮತ್ತು ಬೆಂಜಮಿನ್‍ ಗೋತ್ರಗಳನ್ನು ಬಿಟ್ಟು ಉಳಿದ) ದಶಗೋತ್ರಗಳು.
  4. the Twelve Tribes ಜೇಕಬ್‍ನ 12 ಮಕ್ಕಳಿಂದ ಜನಿಸಿದ (ಯೆಹೂದ್ಯರ) ಹನ್ನೆರಡು ಗೋತ್ರಗಳು.