trial ಟ್ರೈಅಲ್‍
ನಾಮವಾಚಕ
    1. ಪರೀಕ್ಷೆ: was found on trial to be incompetent ಪರೀಕ್ಷಿಸಲಾಗಿ ಅಸಮರ್ಥನೆಂದು ತಿಳಿಯಿತು.
    2. ಪರೀಕ್ಷಾ–ಪ್ರಕ್ರಿಯೆ, ವಿಧಾನ; ಗುಣಗಳನ್ನು ಪರೀಕ್ಷಿಸುವ ಕ್ರಮ ಯಾ ರೀತಿ.
    3. (ಪರೀಕ್ಷೆಗಾಗಿ ನಡೆಸುವ) ಪರೀಕ್ಷೆ; ಪ್ರಯೋಗ.
  1. ಕಷ್ಟ; ಕ್ಲೇಶ; ಹಿಂಸೆ; ಪೀಡೆ; ತೊಂದರೆ; ಒಬ್ಬರ ಶಕ್ತಿ, ತಾಳ್ಮೆ, ಮೊದಲಾದವನ್ನು ಪರೀಕ್ಷಿಸುವಂಥ ವಿಷಯ, ಅನುಭವ ಯಾ ವ್ಯಕ್ತಿ: old age has many trials ಮುಪ್ಪಿನಲ್ಲಿ ನಾನಾ ಕಷ್ಟಗಳೆದುರಾಗುತ್ತವೆ. you will find the piano next door a great trial ಪಕ್ಕದ ಮನೆಯ ಪಿಯಾನೋ ನಿನಗೆ ದೊಡ್ಡ ಪೀಡೆಯಾಗಬಹುದು.
  2. (ನ್ಯಾಯಶಾಸ್ತ್ರ) ನ್ಯಾಯದರ್ಶಿಗಳ ಮುಂದೆ ಯಾ ನ್ಯಾಯದರ್ಶಿಗಳಿಲ್ಲದೆ ಮಾಡುವ ಮೊಕದ್ದಮೆ ಮೊದಲಾದವುಗಳ ನ್ಯಾಯಾಂಗ ವಿಚಾರಣೆ: underwent trial for murder ಖೂನಿ ಆಪಾದನೆಗಾಗಿ ವಿಚಾರಣೆ ಎದುರಿಸಿದ.
  3. = trial match.
  4. (ಒಡ್ಡೊಡ್ಡಾದ ಪ್ರದೇಶದಲ್ಲಿ ಯಾ ರಸ್ತೆಯಲ್ಲಿ ಮೋಟಾರು ಸೈಕಲ್‍ ನಡೆಸುವುದರ ಮೂಲಕ ಒಬ್ಬನ) ವೈಯಕ್ತಿಕ ಸಾಮರ್ಥ್ಯ ಪರೀಕ್ಷಿಸುವುದು.
  5. ಪರೀಕ್ಷಾಸ್ಪರ್ಧೆ; ಕುದುರೆಗಳು, ನಾಯಿಗಳು ಯಾ ಇತರ ಪ್ರಾಣಿಗಳು ಭಾಗವಹಿಸುವ ವಿವಿಧ ಬಗೆಯ ಸ್ಪರ್ಧೆಗಳಲ್ಲಿ, ಪಂದ್ಯಗಳಲ್ಲಿ ಒಂದು.
ಪದಗುಚ್ಛ
  1. give a trial (ಕೊಳ್ಳುವುದು, ಕೆಲಸಕ್ಕೆ ನೇಮಿಸಿಕೊಳ್ಳುವುದು, ಮೊದಲಾದವುಗಳಿಗೆ ಮುಂಚೆ) ಒಮ್ಮೆ ಪರೀಕ್ಷಿಸಿ ನೋಡು.
  2. on trial
    1. ನ್ಯಾಯಾಲಯದಲ್ಲಿ–ವಿಚಾರಣಾಧೀನ; ವಿಚಾರಣೆಯಲ್ಲಿರುವ, ವಿಚಾರಣೆ ನಡೆಯುತ್ತಿರುವ.
    2. ಪರೀಕ್ಷೆಯಲ್ಲಿರುವ; ಪರೀಕ್ಷಾಧೀನ; ಪರೀಕ್ಷೆಗೆ ಒಳಗಾಗಿರುವ; ಸೂಕ್ತವಾಗಿದ್ದರೆ ಮಾತ್ರ ಆಯ್ಕೆಮಾಡುವ.
  3. trial and error ಉದ್ದಿಷ್ಟ ಫಲಿತಾಂಶ ದೊರೆಯುವವರೆಗೂ ಪದೇಪದೇ ಮಾಡುವ (ಸಾಮಾನ್ಯವಾಗಿ ವಿಧವಿಧವಾದ, ಆದರೆ ಕ್ರಮಬದ್ಧವಲ್ಲದ) ಪ್ರಯತ್ನಗಳು ಯಾ ಪರೀಕ್ಷೆಗಳು; ಪ್ರಾಪ್ತಿಪರ್ಯಂತ ಪ್ರಯತ್ನ; ಸಿದ್ಧಿಯವರೆಗೆ ಸಾಧನೆ.
  4. trial eights ಪರೀಕ್ಷಾರ್ಥಕ ಎಂಟು; ದೋಣಿಪಂದ್ಯಕ್ಕೆ ಹುಟ್ಟುಗಾರರನ್ನು ಆರಿಸಲು ಪರೀಕ್ಷಾರ್ಥವಾಗಿ ಪಂದ್ಯಕ್ಕೆ ಬಿಟ್ಟ ಎಂಟೆಂಟು ಹುಟ್ಟುಗಳ ಎರಡು ದೋಣಿಗಳು.
  5. trial of strength ಶಕ್ತಿ ಪ್ರದರ್ಶನ; ಯಾರು ಹೆಚ್ಚು ಬಲಿಷ್ಠರೆಂಬಉದರ ಪರೀಕ್ಷೆ.