triad ಟ್ರೈಆ(ಅ)ಡ್‍
ನಾಮವಾಚಕ
  1. ಮುಕ್ಕೂಟ; ತ್ರಿತಯ; ತ್ರಯ; ತ್ರಿಕ; ಮೂರರ ತಂಡ ಯಾ ಗುಂಪು.
  2. ಮೂರರ ಸಂಖ್ಯೆ.
  3. (ಸಂಗೀತ) ಸ್ವರತ್ರಯ ಮೇಳ.
  4. (ವೆಲ್ಷ್‍ ಸಾಹಿತ್ಯದಲ್ಲಿ ಬರುವ) ಮುಕ್ಕೂಟ ರಚನೆ; ಮೂರುಮೂರಾಗಿ ಗುಂಪುಮಾಡಿ ವಿಷಯ ಯಾ ಹೇಳಿಕೆಗಳನ್ನು ನಿರೂಪಿಸುವ ಕ್ರಮ.
  5. (ಚೈನಾದ) ದುಷ್ಕರ್ಮಿತ್ರಯ; ಮೂವರು ದುಷ್ಕರ್ಮಿಗಳ ಗುಪ್ತಕೂಟ.