See also 2tree
1tree ಟ್ರೀ
ನಾಮವಾಚಕ
  1. (ಮುಖ್ಯವಾಗಿ ಬಹುವಾರ್ಷಿಕ) ಮರ; ತರು; ವೃಕ್ಷ.
  2. (ಬಗೆಬಗೆಯ ಕೆಲಸಗಳಿಗಾಗಿ ಬಳಕೆ ಯಾಗುವ) ಮರ ಮೊದಲಾದವುಗಳ–ತುಂಡು, ಚೌಕಟ್ಟು, ಅಚ್ಚು: shoe-tree ಷೂ ಅಚ್ಚು.
  3. (ಪ್ರಾಚೀನ ಪ್ರಯೋಗ ಯಾ ಕಾವ್ಯಪ್ರಯೋಗ)
    1. ಗಲ್ಲುಮರ; ನೇಣುಗಂಬ.
    2. ಶಿಲುಬೆ (ಮುಖ್ಯವಾಗಿ ಯೇಸುವನ್ನು ಏರಿಸಿದ್ದು).
  4. (ಗಣಿತ) ವೃಕ್ಷರೇಖಾಕೃತಿ; ಕವಲುಗೆರೆಗಳ ಯಾ ಕವಲು ಗೆರೆಗಳಿಂದ ಕೂಡಿದ ನಕ್ಷೆ.
  5. = family tree.
ಪದಗುಚ್ಛ
  1. grow on trees (ರೂಪಕವಾಗಿ ಸಾಮಾನ್ಯವಾಗಿ ನಿಷೇಧಾರ್ಥಕದೊಡನೆ ಪ್ರಯೋಗ) ಹೇರಳವಾಗಿ (ಹೆಚ್ಚು ಪ್ರಯಾಸವಿಲ್ಲದೆ) ಸಿಕ್ಕುವಂತಿರು; ಸಮೃದ್ಧವಾಗಿರು; ಯಥೇಷ್ಟವಾಗಿರು.
  2. tree of heaven ದುರ್ವಾಸನೆಯ ಹೂ ಬಿಡುವ, ಐಲ್ಯಾಂಥಸ್‍ ಆಲ್ಟಿಸಿಮ ಕುಲದ, ಏಷ್ಯದ ಒಂದು ಅಲಂಕಾರ ವೃಕ್ಷ.
  3. tree of knowledge ಜ್ಞಾನ ವೃಕ್ಷ; ಸಮಗ್ರ ಜ್ಞಾನದ ನಾನಾ ಶಾಖೆಗಳು.
  4. tree of life
    1. (ಬೈಬ್‍ಲ್‍) ಜೀವನ ವೃಕ್ಷ (ರೂಪಕವಾಗಿ ಸಹ); ಅದರ ಹಣ್ಣನ್ನು ಯಾ ಎಲೆಯನ್ನು ತಿಂದರೆ ಅಮರತ್ವ ಬರುವುದೆಂದು ನಂಬಿರುವ, ಸ್ವರ್ಗದಲ್ಲಿನ ಒಂದು ಮರ.
    2. = arbor vitae.
See also 1tree
2tree ಟ್ರೀ
ಸಕರ್ಮಕ ಕ್ರಿಯಾಪದ
  1. (ಪ್ರಾಣಿಯನ್ನು ಯಾ ಮನುಷ್ಯನನ್ನು) ಮರ–ಹತ್ತಿಸು, ಹತ್ತುವಂತೆ ಮಾಡು.
  2. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ)ಕಷ್ಟದಲ್ಲಿ ಸಿಕ್ಕಿಸು; ಸಂಕಟಕ್ಕೆ, ಇಕ್ಕಟ್ಟಿಗೆ, ಪೇಚಿಗೆ–ಸಿಕ್ಕಿಸು.
  3. ಪಾದರಕ್ಷೆಯನ್ನು (ಮೋಜದ) ಅಚ್ಚುಮರದ ಮೇಲೆ ಹಿಗ್ಗಲಿಸು.