See also 2treasure
1treasure ಟ್ರೆಷರ್‍
ನಾಮವಾಚಕ
    1. ಪ್ರಶಸ್ತ ಲೋಹಗಳು ಯಾ ರತ್ನಗಳು.
    2. ಇವುಗಳ ಸಂಗ್ರಹ, ರಾಶಿ.
    3. ನಿಧಿ; ಸಂಪತ್ತು; ಐಶ್ವರ್ಯ; ಸಂಗ್ರಹಿಸಿಟ್ಟ ಸಿರಿ: had amassed great treasure ಬಹಳ ಐಶ್ವರ್ಯ ಗಳಿಸಿದ್ದ.
  1. ಅಪೂರ್ವ, ಅಮೂಲ್ಯ, ಪ್ರಶಸ್ತ–ಕೃತಿ; ಅಪೂರ್ವತೆ, ಕಲಾಕೌಶಲ, ಅದು ಸಂಬಂಧಿಸಿರುವ ಸಂಗತಿಗಳು, ಮೊದಲಾದ ಕಾರಣಗಳಿಂದಾಗಿ ಮೌಲಿಕವೆಂದು ಪರಿಗಣಿಸಿರುವ ವಸ್ತು: art treasures ಅಮೂಲ್ಯ ಕಲಾಕೃತಿಗಳು; ಕಲಾಕೃತಿಗಳ ಅಪೂರ್ವ ಸಂಗ್ರಹ.
  2. (ಆಡುಮಾತು) ನಿಧಿ; ಬಹಳ ಮೆಚ್ಚಿಗೆಗಳಿಸಿದ ಯಾ ಅತ್ಯಂತ ಗೌರವಾನ್ವಿತ ವ್ಯಕ್ತಿ.
See also 1treasure
2treasure ಟ್ರೆಷರ್‍
ಸಕರ್ಮಕ ಕ್ರಿಯಾಪದ
  1. (ಅಮೂಲ್ಯವೆಂದು) ಶೇಖರಿಸಿಡು; ಭದ್ರಪಡಿಸು.
  2. (ಮುಖ್ಯವಾಗಿ ಬಹಳ ಕಾಲದಿಂದ ಇಟ್ಟುಕೊಂಡಿರುವ ವಸ್ತುವನ್ನು) ಅತ್ಯಮೂಲ್ಯವಾದುದೆಂದು ಭಾವಿಸು.
  3. (ವ್ಯಕ್ತಿಯ ಮಾತುಗಳು, ರೂಪ, ಮೊದಲಾದವನ್ನು ಅತ್ಯಮೂಲ್ಯವೆಂದು ನೆನಪಿನಲ್ಲಿ) ಸಂಗ್ರಹಿಸಿಡು.