See also 2travel
1travel ಟ್ರಾವ(ವ್‍)ಲ್‍
ಕ್ರಿಯಾಪದ

(ಭೂತರೂಪ ಮತ್ತು ಭೂತಕೃದಂತ travelled (ಅಮೆರಿಕನ್‍ ಪ್ರಯೋಗ traveled); ವರ್ತಮಾನ ಕೃದಂತ traveling (ಅಮೆರಿಕನ್‍ ಪ್ರಯೋಗ travelling)).

ಸಕರ್ಮಕ ಕ್ರಿಯಾಪದ
  1. (ದೂರವನ್ನು) ಕ್ರಮಿಸು; ನಡೆ.
  2. (ಒಂದು ಕಡೆ ಯಾ ಸ್ಥಳದ, ದೇಶದ ಮೂಲಕ) ಓಡಾಡು; ಪ್ರಯಾಣಮಾಡು.
ಅಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ದೀರ್ಘವಾದ, ದೂರದೇಶದ) ಪ್ರಯಾ–ಮಾಡು, ಹೋಗು; ದೇಶಾಟನೆ ಮಾಡು; ದೇಶಸಂಚಾರ ನಡೆಸು; ದೇಶ–ಸುತ್ತು, ತಿರುಗು: ordered to travel for his health ಅವನ ಆರೋಗ್ಯದ ನಿಮಿತ್ತ ಅವನಿಗೆ ದೂರಪ್ರಯಾಣ ವಿಧಿಸಲಾಯಿತು.
  2. (ಆಡುಮಾತು) ದೂರ ಪ್ರಯಾಣ ತಡೆದುಕೊ: wines that travel badly ದೂರಪ್ರಯಾಣ ತಡೆದುಕೊಳ್ಳಲಾರದ ಮದ್ಯಗಳು.
  3. (ಒಂದು ಸಂಸ್ಥೆ, ಉತ್ಪಾದನೆ, ಮೊದಲಾದವುಗಳ ಪರವಾಗಿ) ಸಂಚಾರಿ ವ್ಯಾಪಾರಗಾರನ ಕೆಲಸ ಮಾಡು; ತಿರುಗು ದಲ್ಲಾಳಿ ಕೆಲಸ ಮಾಡು.
  4. (ಯಂತ್ರದ ಯಾ ಅದರ ಭಾಗದ ವಿಷಯದಲ್ಲಿ) (ಕಂಬಿ ಮೊದಲಾದವುಗಳ ಮೇಲೆ, ಗಾಡಿ ಮೊದಲಾದವುಗಳಲ್ಲಿ) ನಿರ್ದಿಷ್ಟ ರೀತಿಯಲ್ಲಿ ಓಡಾಡು, ಚಲಿಸು ಯಾ ತಿರುಗು.
  5. (ಮುಖ್ಯವಾಗಿ ಬಉದ್ಧಿಪೂರ್ವಕವಾಗಿ ವಿಷಯದಿಂದ ವಿಷಯಕ್ಕೆ ಕ್ರಮವಾಗಿ) ಚಲಿಸು; ಹರಿ; ಸಾಗು; ಹೋಗು; ಸಂಚರಿಸು: the eye travelled over the scene ಕಣ್ಣು ದೃಶ್ಯದ ಮೇಲೆ ಕ್ರಮವಾಗಿ ಚಲಿಸಿತು. mind travels over the events of the day ಮನಸ್ಸು ಆ ದಿನ ನಡೆದ ಘಟನೆಗಳ ಮೇಲೆ ಮತ್ತೆ ಹರಿಯುತ್ತದೆ, ಘಟನೆಗಳನ್ನು ಕ್ರಮವಾಗಿ ನೆನೆಯುತ್ತದೆ, ಚಿಂತಿಸುತ್ತದೆ.
  6. (ಜಿಂಕೆ ಮೊದಲಾದವುಗಳ ವಿಷಯದಲ್ಲಿ) ಮೇಯುತ್ತ ಮುಂದೆ ಸಾಗು.
  7. ನಡೆ; ಹೋಗು; ಸಾಗು; ಸಂಚರಿಸು; ಚಲಿಸು; ಗೊತ್ತಾದ ರೀತಿಯಲ್ಲಿ ಯಾ ನಿರ್ದಿಷ್ಟ ವೇಗದಲ್ಲಿ ಚಲಿಸು ಯಾ ಮುಂದುವರಿ: the horse travels slowly ಕುದುರೆ ನಿಧಾನವಾಗಿ ಸಾಗುತ್ತದೆ. light travels faster than sound ಶಬ್ದಕ್ಕಿಂತ ವೇಗವಾಗಿ ಬೆಳಕು ಚಲಿಸುತ್ತದೆ.
  8. (ಆಡುಮಾತು) (ರಸ್ತೆ ಮೊದಲಾದವುಗಳಲ್ಲಿ) ಬೇಗ ಮುಂದೆ–ಸಾಗು, ಚಲಿಸು, ನಡೆ.
ಪದಗುಚ್ಛ

travel out of the record ವಿಷಯ ಬಿಟ್ಟು ಹೋಗು, ಅಲೆ.

See also 1travel
2travel ಟ್ರಾವಲ್‍
ನಾಮವಾಚಕ
  1. (ಮುಖ್ಯವಾಗಿ ಹೊರದೇಶಗಳಲ್ಲಿ) ಪ್ರಯಾಣ, ಪ್ರವಾಸ–ಮಾಡುವುದು.
  2. (ಮುಖ್ಯವಾಗಿ ದೀರ್ಘವಾದ, ದೂರದೇಶಗಳ) ಯಾತ್ರೆ; ಪ್ರಯಾಣ; ದೇಶಾಟನೆ; ದೇಶ–ಯಾತ್ರೆ, ಸಂಚಾರ, ಪರ್ಯಟನೆ: has returned from his travels ಅವನು ದೇಶಸಂಚಾರ ಮುಗಿಸಿ ಹಿಂತಿರುಗಿದ್ದಾನೆ.
  3. (ಯಂತ್ರಭಾಗದ) ಓಡಾಟ; ಚಲನೆ; ಚಲನೆಯ–ರೀತಿ, ವೇಗ, ವಿಸ್ತಾರ, ವ್ಯಾಪ್ತಿ.