See also 2trash
1trash ಟ್ರಾಷ್‍
ನಾಮವಾಚಕ
  1. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ಕಸ; ಕಚಡ; ಕೆಲಸಕ್ಕೆ ಬಾರದ್ದು.
  2. (ಸಮರಿದ ಪೊದೆಯ, ಮರದ) ಚೂರುಪಾರು; ಕಡ್ಡಿಪುಳ್ಳೆಗಳು; ತರಗುಪರಗು.
  3. ಬಊಸಾ ಸಾಹಿತ್ಯ; ಕಳಪೆ ವಸ್ತು-ವಿನ್ಯಾಸಗಳಿಂದ ಕೂಡಿದ ಲೇಖನ, ಸಾಹಿತ್ಯಕೃತಿ.
  4. ಕೆಲಸಕ್ಕೆ ಬಾರದ ಮಾತು; ಅಸಂಬದ್ಧ ಪ್ರಲಾಪ.
  5. ಶುದ್ಧ ಅಪ್ರಯೋಜಕ ವ್ಯಕ್ತಿ(ಗಳು).
    1. ಕಳಪೆ ಕೆಲಸ.
    2. (ಆ ಕೆಲಸಕ್ಕೆ ಬಳಸಿದ) ಕಳಪೆ–ವಸ್ತು, ಸಾಮಗ್ರಿ.
  6. = cane trash.
See also 1trash
2trash ಟ್ರಾಷ್‍
ಸಕರ್ಮಕ ಕ್ರಿಯಾಪದ
  1. (ಕಬ್ಬಿನ ಜಲ್ಲೆಗಳು ಬೇಗ ಬಲಿಯುವಂತೆ) ಕಬ್ಬಿನ ಸೋಗೆ–ಸಮರು, ತೆಗೆದುಹಾಕು.
  2. ಕೆಲಸಕ್ಕೆ ಬಾರದ್ದೆಂದು ಬಿಸಾಡು, ತೆಗೆದುಹಾಕು.
  3. ಒಡೆದು ಚೂರುಮಾಡು.
  4. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ, ಆಡುಮಾತು) ನಾಶ, ಹಾಳು–ಮಾಡು.
  5. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ, ಆಡುಮಾತು) ಕಳಪೆ ಗುಣವನ್ನು–ಬಯಲುಮಾಡು, ಹೊರಗೆಡಹು, ಅಲ್ಲಗಳೆ.