See also 2transplant
1transplant ಟ್ರಾ(ಟ್ರಾ)ನ್ಸ್‍ಪ್ಲಾಂಟ್‍
ಸಕರ್ಮಕ ಕ್ರಿಯಾಪದ
  1. (ಸಸ್ಯ ಮೊದಲಾದವನ್ನು) ಕಿತ್ತು ಬೇರೆಡೆ ನೆಡು; ಕಸಿ ಮಾಡು; ನಾಟಿ ಹಾಕು.
  2. ಒಂದು ಸ್ಥಳದಿಂದ ತೆಗೆದು ಮತ್ತೊಂದು ಸ್ಥಳದಲ್ಲಿ (ಮುಖ್ಯವಾಗಿ ನಾಶವಾಗದಂತೆ) ಸ್ಥಾಪಿಸು; ಸ್ಥಳಾಂತರಿಸು.
  3. (ಶಸ್ತ್ರವೈದ್ಯ) (ಜೀವಂತ ಅಂಗಾಂಶ ಯಾ ಅಂಗವನ್ನು ಶರೀರದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಯಾ ಒಬ್ಬನ ಯಾ ಒಂದು ಪ್ರಾಣಿಯ ಶರೀರದಿಂದ ಮತ್ತೊಬ್ಬನ ಯಾ ಮತ್ತೊಂದು ಪ್ರಾಣಿಯ ಶರೀರಕ್ಕೆ) ಕಿತ್ತು ನೆಲೆಗೊಳಿಸು; ಅನ್ಯತ್ರ ಸ್ಥಾಪಿಸು; ನಾಟಿ ಮಾಡು, ಕಸಿಮಾಡು.
See also 1transplant
2transplant ಟ್ರಾ(ಟ್ರಾ)ನ್ಸ್‍ಪ್ಲಾಂಟ್‍
ನಾಮವಾಚಕ
  1. (ಶಸ್ತ್ರವೈದ್ಯ)
    1. ಅಂಗಾಂಶ ಯಾ ದೇಹದ ಅಂಗಗಳ–ನಾಟಿ, ಕಸಿ, ನೆಡುವುದು; (ಶರೀರಭಾಗ ಮೊದಲಾದವುಗಳ) ಸ್ಥಳಾಂತರೀಕರಣ.
    2. ಕಿತ್ತು ನಾಟಿ ಮಾಡಿದ ಅಂಗ, ಅಂಗಾಶ, ಮೊದಲಾದವು.
  2. ನಾಟಿ ಹಾಕಿದ ಸಸ್ಯ ಮೊದಲಾದವು.