transparent ಟ್ರಾ(ಟ್ರಾ)ನ್ಸ್‍ಪ್ಯಾ(ಪೇ)ರಂಟ್‍
ಗುಣವಾಚಕ
  1. ಪಾರದರ್ಶಕ; ಆಚೆ ಇರುವುದನ್ನು ಸ್ಪಷ್ಟವಾಗಿ ಕಾಣುವಂತೆ ತನ್ನ ಮೂಲಕ ಬೆಳಕನ್ನು ಹಾಯಗೊಡುವ.
  2. (ಭೌತವಿಜ್ಞಾನ) ಪಾರವಾಹಕ; (ತನ್ನ ಮೂಲಕ) ಶಾಖ ಯಾ ಇತರ ವಿದ್ಯುತ್ಕಾಂತ ಕಿರಣಗಳನ್ನು ವಿರೂಪಗೊಳಿಸದೆ ಅವಿಚ್ಫಿನ್ನವಾಗಿ ಹಾಯಗೊಡುವ.
  3. ಸ್ಪಷ್ಟಗೋಚರ; ಸುಗೋಚರ:
    1. (ವೇಷ, ನೆಪ, ಮೊದಲಾದವುಗಳ ವಿಷಯದಲ್ಲಿ) ಸುಲಭವಾಗಿ ಗೋಚರವಾಗುವ; ಕಣ್ಣಿಗೆ ಬೀಳುವ.
    2. (ಉದ್ದೇಶ, ಗುಣ, ಮೊದಲಾದವುಗಳ ವಿಷಯದಲ್ಲಿ, ಮರೆಮಾಚಿದರೂ) ಸುಲಭವಾಗಿ ಗೊತ್ತಾಗುವ, ವ್ಯಕ್ತವಾಗುವ.
  4. (ವ್ಯಕ್ತಿ ಮೊದಲಾದವರ ವಿಷಯದಲ್ಲಿ) ಸುಲಭವಾಗಿ ಅರ್ಥಮಾಡಿಕೊಳ್ಳಬಹುದಾದ; ವಿಸ್ಪಷ್ಟ; ಸುವ್ಯಕ್ತ: transparent sincerity ವಿಸ್ಪಷ್ಟ ಪ್ರಾಮಾಣಿಕತೆ.
  5. ಸರ್ವವೇದ್ಯವಾದ; ಎದ್ದು ಕಾಣುವ; ಎಲ್ಲರಿಗೂ ಗೊತ್ತಾಗುವ: a story with a transparent plot ಸರ್ವವೇದ್ಯವಾದ ವಸ್ತುವುಳ್ಳ ಕಥೆ.
  6. ನೇರ; ಋಜು; ಮುಚ್ಚುಮರೆ ಇಲ್ಲದ; ನಿಷ್ಕಪಟ; ಅಕೃತ್ರಿಮ.