transmutation ಟ್ರಾ(ಟ್ರಾ)ನ್ಸ್‍(ನ್ಸ್‍)ಮ್ಯೂಟೇಷನ್‍
ನಾಮವಾಚಕ
  1. ಬದಲಾವಣೆ; ಪರಿವರ್ತನೆ; ರೂಪಾಂತರ; ಬೇರೊಂದು ರೂಪ, ಸ್ವಭಾವ, ಮೊದಲಾದವಕ್ಕೆ ಬದಲಾಯಿಸುವುದು ಯಾ ಮಾರ್ಪಾಡಾಗುವುದು.
  2. (ಚರಿತ್ರೆ) (ರಸವಿದ್ಯೆ) ಲೋಹ ಪರಿವರ್ತನೆ; ಕ್ಷುದ್ರ ಲೋಹವನ್ನು ಪ್ರಶಸ್ತಲೋಹವನ್ನಾಗಿ ಪರಿವರ್ತಿಸುವುದು.
  3. (ಭೌತವಿಜ್ಞಾನ) ಧಾತು ಪರಿವರ್ತನೆ; ಬೈಜಿಕ ಸಂಘಟ್ಟನ ಮೊದಲಾದವುಗಳಿಂದ ಒಂದು ರಾಸಾಯನಿಕ ಧಾತು ಇನ್ನೊಂದು ರಾಸಾಯನಿಕ ಧಾತುವಾಗಿ ಬದಲಾಯಿಸುವುದು.
  4. (ಜ್ಯಾಮಿತಿ) ಆಕೃತಿ ಪರಿವರ್ತನೆ; ಒಂದು ಆಕೃತಿ ಯಾ ಕಾಯ ಅದೇ ಸಲೆ(ವಿಸ್ತೀರ್ಣದ) ಯಾ ಗಾತ್ರದ ಇನ್ನೊಂದು ಆಕೃತಿ ಯಾ ಕಾಯವಾಗಿ ಬದಲಾಯಿಸುವುದು.
  5. (ಜೀವವಿಜ್ಞಾನ) ಜಾತಿ ಪರಿವರ್ತನಾ ಸಿದ್ಧಾಂತ; ಜಾತ್ಯಂತರ ಸಿದ್ಧಾಂತ; ಒಂದು ಜೀವಿಜಾತಿ ಬೇರೊಂದು ಜೀವಿಜಾತಿಯಾಗಿ ಬದಲಾಯಿಸುತ್ತದೆಯೆಂಬ ಲೆಮಾರ್ಕನ ವಾದ.