transmit ಟ್ರಾ(ಟ್ರಾ)ನ್ಸ್‍(ನ್ಸ್‍)ಮಿಟ್‍
ಸಕರ್ಮಕ ಕ್ರಿಯಾಪದ
  1. ಮುಂದಕ್ಕೆ–ಸಾಗಿಸು, ಕಳಿಸು, ಕಳಿಸಿ ಕೊಡು; ಒಯ್ಯಿ; ತಲಪಿಸು; ರವಾನಿಸು: transmit the message ಸುದ್ದಿ ರವಾನಿಸು.
  2. (ಒಬ್ಬರಿಂದ ಇನ್ನೊಬ್ಬರಿಗೆ) ಹರಡು; ಹಬ್ಬಿಸು: will transmit the disease ರೋಗವನ್ನು ಹರಡುತ್ತದೆ.
  3. (ಶಾಖ, ಬೆಳಕು, ಶಬ್ದ, ವಿದ್ಯುಚ್ಫಕ್ತಿ, ರಾಗಭಾವಗಳು, ಸುದ್ದಿ, ಮೊದಲಾದವುಗಳನ್ನು) ಸಾಗಿಸು; ಸಾಗಗೊಡು; ಸಂವಹನ ಮಾಡು; (ಅವುಗಳಿಗೆ) ವಾಹಕವಾಗು: the message transmits hope ಸುದ್ದಿ, ಸಂದೇಶ ಭರವಸೆ ನೀಡುತ್ತದೆ.
  4. (ರೇಡಿಯೋ ಯಾ ದೂರದರ್ಶನ ಕಾರ್ಯಕ್ರಮವನ್ನು) ಪ್ರಸಾರ ಮಾಡು.
ಪದಗುಚ್ಛ

transmit to posterity ಮುಂದಿನ ಪೀಳಿಗೆಗೆ ಒಯ್ಯಿ, ಸಾಗಿಸು, ರವಾನಿಸು.