translate ಟ್ರಾ(ಟ್ರಾ)ನ್‍ಸ್‍(ಸ್‍)ಲೇಟ್‍
ಸಕರ್ಮಕ ಕ್ರಿಯಾಪದ
  1. (ಮಾತು, ವಾಕ್ಯ, ಗ್ರಂಥ, ಕವನ, ಮೊದಲಾದವನ್ನು) ಬೇರೆ ಭಾಷೆಗೆ–ಪರಿವರ್ತಿಸು, ತರ್ಜುಮೆ ಮಾಡು, ಭಾಷಾಂತರಿಸು, ಅನುವಾದ ಮಾಡು.
  2. ಬೇರೊಂದು ರೂಪದಲ್ಲಿ, ಮುಖ್ಯವಾಗಿ ಸರಳವಾದ ಮಾತುಗಳಲ್ಲಿ ತಿಳಿಸು, ಹೇಳು.
  3. (ಸಂಜ್ಞೆಗಳು, ಚಲನೆಗಳು, ನಡವಳಿಕೆ, ಸೂಚನೆ, ಮೊದಲಾದವನ್ನು) ಅರ್ಥೈಸು; ಅರ್ಥ ಹೇಳು; ಅರ್ಥಮಾಡು; ವ್ಯಾಖ್ಯಾನ ಮಾಡು: I translated this as a protest ಇದನ್ನು ನಾನು ಪ್ರತಿಭಟನೆಯೆಂದು ಭಾವಿಸಿದೆ. translated his gestures to the by-standers ಅವನ ಸಂಜ್ಞೆಗಳನ್ನು ಪಕ್ಕದಲ್ಲಿ ನಿಂತಿದ್ದವರಿಗೆ ಅರ್ಥೈಸಿದ.
  4. ಒಬ್ಬ ವ್ಯಕ್ತಿ, ಸ್ಥಳ ಯಾ ಸ್ಥಿತಿಯಿಂದ ಇನ್ನೊಂದಕ್ಕೆ ತಿರುಗು, ಬದಲಾಯಿಸು: was translated by joy ಆನಂದದಿಂದ ಸ್ಥಿತಿ ಬದಲಾಯಿಸಿದ.
  5. (ಚರ್ಚ್‍)
    1. (ಬಿಷಪ್ಪನನ್ನು ಒಂದು ಚರ್ಚು ಪ್ರಾಂತದಿಂದ ಮತ್ತೊಂದು ಪ್ರಾಂತಕ್ಕೆ) ಬದಲಾಯಿಸು; ವರ್ಗಮಾಡು;
    2. (ಸಾಧುಸಂತರ ಸ್ಮಾರಕ ಅವಶಿಷ್ಟಗಳನ್ನು) ಬೇರೆಡೆಗೆ ಸಾಗಿಸು; ಸ್ಥಳಾಂತರಿಸು.
  6. (ಬೈಬ್‍ಲ್‍) ಸಶರೀರವಾಗಿ ಸ್ವರ್ಗಕ್ಕೆ ಒಯ್ಯಿ.
  7. ರೂಪಾಂತರಿಸು; ರೂಪ ಬದಲಾಯಿಸು.
  8. (ಯಂತ್ರಶಾಸ್ತ್ರ) ಸ್ಥಾನಾಂತರ ಚಲನೆ ಕೊಡು; ಸಾಗುಚಲನೆ ಕೊಡು; ವಸ್ತು ಉರುಳದೆ ಯಾ ಅದರ ಎಲ್ಲ ಭಾಗಗಳೂ ಒಂದೇ ದಿಕ್ಕಿನಲ್ಲಿ ಅಖಂಡವಾಗಿ ಚಲಿಸುವಂತೆ ಮಾಡು.
  9. (ಒಂದು ಭಾವನೆ, ಗ್ರಂಥ, ಮೊದಲಾದವನ್ನು) ಇನ್ನೊಂದು ರೂಪಕ್ಕೆ, ಮುಖ್ಯವಾಗಿ ಸರಳವಾದ ರೂಪಕ್ಕೆ–ಇಡು, ವ್ಯಕ್ತಪಡಿಸು, ರೂಪಾಂತರಿಸು.
ಅಕರ್ಮಕ ಕ್ರಿಯಾಪದ
  1. (ಸಾಹಿತ್ಯಕ ಕೃತಿ ಮೊದಲಾದವುಗಳ ವಿಷಯದಲ್ಲಿ) ಅನುವಾದಿತವಾಗು; ಭಾಷಾಂತರಗೊಳ್ಳು; ತರ್ಜುಮೆಯಾಗು: the poem translates well ಕವನ ಚೆನ್ನಾಗಿ ಭಾಷಾಂತರಗೊಳ್ಳುತ್ತದೆ, ಭಾಷಾಂತರಗೊಳ್ಳಬಲ್ಲದು.
  2. ಪರಿಣಮಿಸು; ಪರಿಣಾಮವಾಗು; ಪರಿವರ್ತಿತವಾಗು; ರೂಪದಲ್ಲಿ ಪ್ರಕಟವಾಗು: translate into action ಕಾರ್ಯರೂಪ ಪಡೆ; ಕಾರ್ಯವಾಗಿ ಪರಿಣಮಿಸು.