See also 2transient
1transient ಟ್ರಾನ್‍ಸಿ(ಸಿ)ಅಂಟ್‍
ಗುಣವಾಚಕ
  1. ಅಶಾಶ್ವತ; ಅಸ್ಥಿರ; ನಶ್ವರ: the transient affairs of this life ಇಹಜೀವನದ ನಶ್ವರ ವ್ಯಾಪಾರಗಳು.
  2. ಕ್ಷಣಭಂಗುರ; ಕ್ಷಣಿಕ; ಕ್ಷಣಮಾತ್ರದ: transient gleam of hope ಕ್ಷಣಮಾತ್ರದ ಆಶಾಕಿರಣ.
  3. ಸ್ವಲ್ಪಕಾಲ (ಮಾತ್ರ) ಇರುವ; ಹಂಗಾಮಿ: the transient guests at a hotel ಹೋಟೆಲಿನಲ್ಲಿ ಕ್ಷಣಕಾಲ ತಂಗಿದ್ದ ಅತಿಥಿಗಳು.
  4. (ಸಂಗೀತ) ಅಮುಖ್ಯವಾದ; ಸಂಬಂಧ ಕಲ್ಪಿಸಲು ಮಾತ್ರ ಬೇಕಾದ: transient note ಸಂಬಂಧಕ ಸ್ವರ; ಸಂಬಂಧಕಲ್ಪನೆಗೆ ಮಾತ್ರ ಬೇಕಾದ ಸ್ವರ.
See also 1transient
2transient ಟ್ರಾನ್‍ಸಿ(ಸಿ)ಅಂಟ್‍
ನಾಮವಾಚಕ
  1. ಹಂಗಾಮಿ ಅತಿಥಿ ಯಾ ಸಂದರ್ಶಕ; ಸ್ವಲ್ಪಕಾಲ ಇದ್ದುಹೋಗುವ ವ್ಯಕ್ತಿ.
  2. (ವಿದ್ಯುದ್ವಿಜ್ಞಾನ) ಕ್ಷಣಿಕ, ಕ್ಷಣಕಾಲದ ವಿದ್ಯುತ್‍ ಪ್ರವಾಹ ಮೊದಲಾದವು.