transfuse ಟ್ರಾ(ಟ್ರಾ)ನ್ಸ್‍ಹೂಸ್‍
ಸಕರ್ಮಕ ಕ್ರಿಯಾಪದ
  1. (ದ್ರವ, ಅನಿಲ, ಮೊದಲಾದವನ್ನು) ಪಾತ್ರಾಂತರಗೊಳಿಸು; ಒಂದು ಪಾತ್ರೆ ಮೊದಲಾದವುಗಳಿಂದ ಮತ್ತೊಂದಕ್ಕೆ ಹರಿಸು.
  2. ವ್ಯಾಪನೆಗೊಳಿಸು; ವ್ಯಾಪಿಸುವಂತೆ, ತುಂಬಉವಂತೆ, ಹರಡುವಂತೆ–ಮಾಡು (ರೂಪಕವಾಗಿ ಸಹ): purple dye transfused the water ಕೆನ್ನೀಲಿ ಬಣ್ಣ ನೀರನ್ನು ವ್ಯಾಪಿಸಿತು. was transfused with gratitude ಕೃತಜ್ಞತೆಯಿಂದ ತುಂಬಿದ.
  3. (ವೈದ್ಯಶಾಸ್ತ್ರ)
    1. (ಒಬ್ಬ ವ್ಯಕ್ತಿ ಯಾ ಪ್ರಾಣಿಯಿಂದ ಇನ್ನೊಬ್ಬ ವ್ಯಕ್ತಿ ಯಾ ಪ್ರಾಣಿಗೆ) ರಕ್ತವನ್ನು ವರ್ಗಾಯಿಸು.
    2. (ನಷ್ಟವಾದ ದೇಹದ್ರವಕ್ಕೆ ಬದಲಾಗಿ) ದ್ರವವನ್ನು ರಕ್ತಕ್ಕೆ ಸೇರಿಸು, ಹರಿಸು.