transformation ಟ್ರಾ(ಟ್ರಾ)ನ್ಸ್‍ಹರ್ಮೇಷನ್‍
ನಾಮವಾಚಕ
  1. ಮಾರ್ಪಾಡು; ರೂಪಾಂತರ; ಪರಿವರ್ತನೆ; ಬದಲಾಯಿಸುವಿಕೆ.
  2. (ಪ್ರಾಣಿವಿಜ್ಞಾನ) ರೂಪ ಪರಿವರ್ತನೆ; ರೂಪಾಂತರ; ರೂಪ ಬದಲಾವಣೆ; ಪ್ರಾಣಿಪ್ರಪಂಚದಲ್ಲಿ ಕೆಲವು ಪ್ರಾಣಿಗಳು, ಮುಖ್ಯವಾಗಿ ಕೀಟಗಳು ಮತ್ತು ಉಭಯಜೀವಿಗಳು, ಜೀವಚರಿತ್ರೆಯ ನಿರ್ದಿಷ್ಟ ಹಂತಗಳಲ್ಲಿ ತೋರುವ ರೂಪ ಬದಲಾವಣೆ.
  3. (ಭೌತವಿಜ್ಞಾನ) ಘನ, ದ್ರವ ಮತ್ತು ಅನಿಲ ಎಂಬ ಸ್ಥಿತಿಗಳಲ್ಲಿ ಒಂದರಿಂದ ಮತ್ತೊಂದಕ್ಕೆ ಬದಲಾವಣೆ, ಪರಿವರ್ತನೆ, ರೂಪಾಂತರ.
  4. (ಗಣಿತ) ಪರಿವರ್ತನೆ; ಜ್ಯಾಮಿತೀಯ ಆಕೃತಿ ಯಾ ಬೀಜಗಣಿತೀಯ ಉಕ್ತಿ ಯಾ ಫಲನವು ಮೌಲ್ಯ ಯಾ ಪರಿಮಾಣವನ್ನು ಉಳಿಸಿಕೊಂಡು ರೂಪದಲ್ಲಿ ಬದಲಾಯಿಸುವುದು.
  5. (ಜೀವವಿಜ್ಞಾನ) ಪರಿವರ್ತನೆ; ಜೀವಕೋಶವು ಸಾಮಾನ್ಯ ಸ್ಥಿತಿಯಿಂದ ಹಾನಿಕರ ಸ್ಥಿತಿಗೆ ಬದಲಾಯಿಸುವುದು.
  6. (ರಸಾಯನವಿಜ್ಞಾನ) (ಧಾತು) ಪರಿವರ್ತನೆ; ವಿಕಿರಣ ಪಟುತ್ವದ ಕಾರಣ ಯಾ ಕೃತಕವಾಗಿ ಒಂದು ರಾಸಾಯನಿಕ ಧಾತು ಇನ್ನೊಂದಾಗಿ ಬದಲಾಯಿಸುವುದು.
  7. (ಭಾಷಾಶಾಸ್ತ್ರ) ವಾಕ್ಯಪರಿವರ್ತನೆ; ಒಂದು ಬಗೆಯ ವಾಕ್ಯರಚನಾ ಕ್ರಮವನ್ನು ನಿರ್ದಿಷ್ಟ ವ್ಯಾಕರಣ ನಿಯಮಗಳ, ಸೂತ್ರಗಳ ರೀತ್ಯಾ ಬೇರೊಂದು ಬಗೆಯ ವಾಕ್ಯರಚನಾಕ್ರಮಕ್ಕೆ ಪರಿವರ್ತಿಸುವ ಯಾ ವಾಕ್ಯದ ಅಂತರಾರ್ಥವನ್ನು ವಾಕ್ಯದ ಪದಗಳ ಪರಸ್ಪರ ಅನ್ವಯದ ನಿರೂಪಣೆಯಾಗಿ ಪರಿವರ್ತಿಸುವ ಪ್ರಕ್ರಿಯೆ.
  8. (ಪ್ರಾಚೀನ ಪ್ರಯೋಗ) ಹೆಂಗಸಿನ ಕೃತಕ ಕೇಶ; ಚೌರಿ.
  9. (ರಂಗದ ಮೇಲೆ) ದೃಶ್ಯದ ಹಠಾತ್‍ ಬದಲಾವಣೆ.
ಪದಗುಚ್ಛ

transformation scene ಪರಿವರ್ತನ ದೃಶ್ಯ; (ಮೂಕ ನಾಟಕ, ಮೂಕಾಭಿನಯ, ಮೊದಲಾದವುಗಳಲ್ಲಿ) ಉಜ್ಜ್ವಲ ದೃಶ್ಯಾವಳಿ ಮೊದಲಾದವು ಪ್ರೇಕ್ಷಕರೆದುರಿನಲ್ಲೇ ಬದಲಾಯಿಸುವುದು.