1transcendental ಟ್ರಾ(ಟ್ರಾ)ನ್ಸೆಂಡೆಂಟಲ್‍
ಗುಣವಾಚಕ
  1. (ತಾರ್ಕಿಕರ ತತ್ತ್ವಶಾಸ್ತ್ರ) (ಅರಿಸ್ಟಾಟಲ್‍ ಹೇಳುವ) ದಶಪದಾರ್ಥಗಳನ್ನು ಮೀರಿದ, ಅವುಗಳಿಗಿಂತ ಮೇಲಿನ; ವಿಷಯಾತೀತ.
  2. (ಕ್ಯಾಂಟನ ತತ್ತ್ವಶಾಸ್ತ್ರ) ಬಉದ್ಧಾ ರೂಢ; ಸ್ವಭಾವಸಿದ್ಧ; ಪ್ರಾಗನುಭವಸಿದ್ಧ; ಅನುಭವದಲ್ಲಿ ಸೇರಿರುವ ಮತ್ತು ಅನುಭವಕ್ಕೆ ಆವಶ್ಯಕವಾದ, ಆದರೆ ಅನುಭವಜನ್ಯವಲ್ಲದ.
  3. (ಮುಖ್ಯವಾಗಿ ಷಿಲಿಂಗ್‍ ಹೇಳುವಂತೆ) ಭಾವನಾತ್ಮಕ; ಭಾವನಾರೂಢ; ನಿಸರ್ಗಕ್ಕೆ, ನೈಸರ್ಗಿಕ ವಸ್ತುಗಳಿಗೆ ಸಂಬಂಧಿಸಿರದೆ, ಮನಸ್ಸಿಗೆ ಚಿಂತನೆಗೆ ಸಂಬಂಧಿಸಿದ; ವಸ್ತು ಹಾಗೂ ವಸ್ತುನಿಷ್ಠವಾದುದೆಲ್ಲವೂ ವ್ಯಕ್ತಿನಿಷ್ಠ ಚಿಂತನೆಯ ಪರಿಣಾಮವೆನ್ನುವ ತತ್ತ್ವದ.
  4. (ಎಮರ್ಸನ್‍ ಹೇಳುವಂತೆ) ದೈವನಿಯಾಮಕತ್ವದ; ಪರವಸ್ತುವನ್ನು ಮಾನವಜೀವನದ ಮಾರ್ಗದರ್ಶಕ ತತ್ತ್ವವೆನ್ನುವ.
  5. (ಆಡುಮಾತು)
    1. ಗಹನ; ದುಜ್ಞೇಯ.
    2. ಅಸ್ಪಷ್ಟ; ಗೂಢ.
    3. ಅಮೂರ್ತ; ಕಲ್ಪನಾತ್ಮಕ.
  6. (ಗಣಿತ) ಅತೀತ; ಬೀಜಗಣಿತಾತೀತ; (ಫಲನದ ವಿಷಯದಲ್ಲಿ) ಬೀಜಗಣಿತೀಯ ಪರಿಕರ್ಮಗಳಾದ ಸಂಕಲನ, ಅವಕಲನ ಯಾ ಘಾತಕರಣಗಳಿಂದ–ಫಲಿತವಾಗದ, ಒದಗದ, ಜನ್ಯವಾಗದ.
2transcendental ಟ್ರಾ(ಟ್ರಾ)ನ್ಸೆಂಡೆಂಟಲ್‍
ನಾಮವಾಚಕ

ವಿಷಯಾತೀತ ವಸ್ತುವನ್ನು ಕುರಿತ ಶಬ್ದ, ಕಲ್ಪನೆ, ಪ್ರಮಾಣ, ಮೊದಲಾದವು.