transaction ಟ್ರಾನ್‍ಸ್ಯಾಕ್‍ಷನ್‍
ನಾಮವಾಚಕ
  1. ನಿರ್ವಾಹ; ನಿರ್ವಹಣೆ; ವ್ಯವಹಾರ, ಕಾರ್ಯ ನಡಸುವುದು: left the transaction of the matter to him ಆ ವಿಷಯದ ನಿರ್ವಹಣೆಯನ್ನು ಅವನಿಗೆ ಬಿಟ್ಟ.
  2. ವ್ಯಾಪಾರ; ವ್ಯವಹಾರ; ವಾಣಿಜ್ಯ ಮೊದಲಾದವುಗಳಿಗೆ ಸಂಬಂಧಿಸಿದ ಕೆಲಸ. the transactions of a firm ಒಂದು ಸಂಸ್ಥೆಯ ವ್ಯವಹಾರಗಳು. the transaction will not bear looking into ಆ ವ್ಯವಹಾರ ಸೂಕ್ಷ್ಮಪರೀಕ್ಷೆಯನ್ನು ತಡೆದುಕೊಳ್ಳಲಾರದು. a profitable transaction ಲಾಭದಾಯಕ ವ್ಯಾಪಾರ.
  3. (ಬಹುವಚನದಲ್ಲಿ) (ವಿದ್ವತ್‍ ಸಭೆ, ಸಂಘ, ಮೊದಲಾದವುಗಳಲ್ಲಿನ) ಕಾರ್ಯಕಲಾಪಗಳು, ನಡವಳಿಕೆಗಳು, ಚರ್ಚೆ, ಲೇಖನ, ಮೊದಲಾದವುಗಳನ್ನು ಕುರಿತ ವರದಿ: Philosophical Transactions of the Royal Society ರಾಯಲ್‍ ಸೊಸೈಟಿಯಲ್ಲಿ ನಡೆದ ತಾತ್ತ್ವಿಕ ಚರ್ಚೆ, ನಡವಳಿಕೆಗಳು.