See also 2trammel
1trammel ಟ್ರಾಮಲ್‍
ನಾಮವಾಚಕ
  1. ಮೂರೆಳೆಬಲೆ; ಮೂರು ಎಳೆ ಬಲೆಗಳ ತಂಡದ ಮೀನು ಬಲೆ; ಮೀನುಗಳು ಅದರ ಮೂಲಕ ನುಗ್ಗಿಹೋಗಲು ಪ್ರಯತ್ನಿಸಿದಾಗ ಚೀಲವೊಂದರಲ್ಲಿ ಸಿಕ್ಕಿ ಬೀಳುವಂತೆ ರಚಿಸಿದ ಒಂದು ಬಗೆಯ ಬಲೆ.
  2. (ಅಮೆರಿಕನ್‍ ಪ್ರಯೋಗ) ಒಲೆಯ ಮೇಲಿನ ತೂಗುಕೊಂಡಿ; ಕೆಟಲ್‍ ಮೊದಲಾದವನ್ನು ತೂಗು ಹಾಕುವ ಒಲೆಯ ಮೇಲಿನ ಕೊಕ್ಕೆ, ಕೊಂಡಿ.Figure: trammels-3
  3. ಅಂಡವೃತ್ತ ಲೇಖಕ ಯಾ ದಂಡ ಕೈವಾರ; ಅಂಡವೃತ್ತಗಳನ್ನು ರೇಖಿಸುವ ಸಲಕರಣೆ.Figure: trammel
  4. (ಸಾಮಾನ್ಯವಾಗಿ ಬಹುವಚನದಲ್ಲಿ) (ಚಲನ ಸ್ವಾತಂತ್ರ್ಯಕ್ಕೆ, ಕಾರ್ಯ ಸ್ವಾತಂತ್ರ್ಯಕ್ಕೆ) (ಅಡೆ) ತಡೆಗಳು; ಬಂಧನಗಳು; ಅಡ್ಡಿಗಳು: trammels of official routine ಕಚೇರಿ ಕ್ರಮದ ಅಡೆತಡೆಗಳು.
ಪದಗುಚ್ಛ

trammels of etiquette ಶಿಷ್ಟಾಚಾರದ (ಸಮಾಜ ಮರ್ಯಾದೆಯ) ಬಂಧನಗಳು, ಅಡ್ಡಿಗಳು.

See also 1trammel
2trammel ಟ್ರಾಮಲ್‍
ಸಕರ್ಮಕ ಕ್ರಿಯಾಪದ

ಅಡ್ಡಿಪಡಿಸು; ತಡೆಯೊಡ್ಡು; ಅಡಚಣೆಯುಂಟುಮಾಡು.