trajectory ಟ್ರಜೆಕ್ಟರಿ, ಟ್ರಾಜಿಕ್ಟರಿ
ನಾಮವಾಚಕ
(ಬಹುವಚನ trajectories).
  1. ಕ್ಷಿಪಣಿ ಪಥ; ವಿಕ್ಷೇಪ ಪಥ; ನಿರ್ದಿಷ್ಟ ಶಕ್ತಿಗಳಿಗೆ ಒಳಪಟ್ಟು ಚಲಿಸುವ ಕ್ಷಿಪಣಿಯ ಯಾ ನಿರ್ದಿಷ್ಟ ಶಕ್ತಿಗಳ ಪ್ರಭಾವಾನುಸಾರ ಚಲಿಸುತ್ತಿರುವ ವಸ್ತುವಿನ ಮಾರ್ಗ.
  2. (ಜ್ಯಾಮಿತಿ) ವಿಕ್ಷೇಪ–ವಕ್ರ, ತಲ; ವಕ್ರರೇಖೆಗಳ ಯಾ ತಲಗಳ ವ್ಯೂಹವನ್ನು ಸಮಾನಕೋನದಲ್ಲಿ ಛೇದಿಸುವ ವಕ್ರರೇಖೆ ಯಾ ತಲ.