trailer ಟ್ರೇಲರ್‍
ನಾಮವಾಚಕ
  1. ಹಬಉ ಬಳ್ಳಿ; ಹಬಉವ ಸಸ್ಯ.
  2. (ಚಲನಚಿತ್ರದ) ಟ್ರೇಲರ್‍; ತುಣಕು; ಜಾಹೀರಾತಿಗೋಸ್ಕರ ಪೂರ್ವಭಾವಿಯಾಗಿ ತೋರಿಸುವ ಅದರ ಕೆಲವು ಭಾಗಗಳು.
  3. ಹಿಂಬಾಲಕ ಬಂಡಿ; ತೋಕೆ ಬಂಡಿ; ಮುಂದೆ ಇನ್ನೊಂದು ಗಾಡಿ ಮೊದಲಾದವುಗಳಿಂದ ಎಳೆಯಲಾದ ಬಂಡಿ, ಗಾಡಿ, ಮೊದಲಾದವು.
  4. ಕೀಲುಗೂಡಿಸಿದ ಲಾರಿಯ ಹಿಂಭಾಗ.
  5. ಬೋಳುಬಂಡಿ; ಚಾವಣಿಯಿಲ್ಲದ, ತೆರೆದ ಗಾಡಿ.
  6. (ದೋಣಿ ಮೊದಲಾದವನ್ನು) ಸಾಗಿಸಲು ಬಳಸುವ ವೇದಿಕೆ, ಚೌಕಟ್ಟು.
  7. (ಅಮೆರಿಕನ್‍ ಪ್ರಯೋಗ) ಮೋಟಾರುಮನೆ; ವಾಸಮಾಡಲು ಸಜ್ಜುಗೊಳಿಸಿರುವ, ಚಾವಣಿ ಹೊದಿಸಿದ ಮೋಟಾರುವಾಹನ.
  8. ಸುಳಿವನ್ನು ಹುಡುಕುವ ಯಾ ಹಿಂಬಾಲಿಸುವ–ವ್ಯಕ್ತಿ ಯಾ ವಸ್ತು.