tradition ಟ್ರಡಿಷನ್‍
ನಾಮವಾಚಕ
  1. ಪೂರ್ವಾಚಾರ; ಸಂಪ್ರದಾಯ; ರೂಢಿ; ಪದ್ಧತಿ; ಆಚಾರ; ಪರಂಪರೆ; ಪೂರ್ವಿಕರಿಂದ ಪರಂಪರೆಯಾಗಿ ಬಂದ ಅಭಿಪ್ರಾಯ, ನಂಬಿಕೆ, ಆಚಾರವಿಚಾರಗಳು.
  2. (ದೇವತಾಶಾಸ್ತ್ರ) ಸಾಂಪ್ರದಾಯಕ ಸೂತ್ರ; ದೈವಿಕ ಪ್ರಾಮಾಣ್ಯವುಂಟೆಂದು ಊಹಿಸಿದ, ಆದರೆ ಲಿಖಿತರೂಪದಲ್ಲಿಲ್ಲದ, ತತ್ತ : (ಮುಖ್ಯವಾಗಿ)
    1. ಭಗವಂತನು ಮೋಸೆಸ್‍ಗೆ ತಿಳಿಸಿಕೊಟ್ಟನೆಂದು ಸಂಪ್ರದಾಯಶರಣರು (ಹ್ಯಾರಿಸಿಗಳು) ನಂಬಿದ್ದ ಧರ್ಮಸೂತ್ರಗಳು ಯಾ ದೈವಶಾಸನಗಳು.
    2. ಕ್ರಿಸ್ತನ ಮತ್ತು ಅವನ ಸಾಕ್ಷಾತ್‍ ಶಿಷ್ಯರು ಪ್ರತಿಪಾದಿಸಿದ, ಆದರೆ ಬರೆದಿಡದ ಮೌಖಿಕ ಉಪದೇಶಗಳು.
    3. ಕುರಾನಿನಲ್ಲಿಲ್ಲದ ಮಹಮ್ಮದನ ವಚನಗಳು, ಕಾರ್ಯಗಳು.
  3. (ಕಲೆ, ಸಾಹಿತ್ಯ, ಮೊದಲಾದವುಗಳ) ಸಂಪ್ರದಾಯ; ಪರಂಪರೆ: stage trade (ನಾಟಕ) ರಂಗಕಲೆಯ ಸಂಪ್ರದಾಯ. the trades of the Dutch School (ಚಿತ್ರಕಲೆ) ಡಚ್‍ ಪಂಥದ ಪರಂಪರೆ.
  4. (ಕಾನೂನು) ವಿಧಿವಿಹಿತವಾಗಿ (ಸ್ವತ್ತು ಮೊದಲಾದವನ್ನು) ಒಪ್ಪಿಸಿಬಿಡುವುದು, ಕೊಟ್ಟುಬಿಡುವುದು.
  5. (ಹಾಸ್ಯ ಪ್ರಯೋಗ) ರೂಢಿ; ಸಂಪ್ರದಾಯ; ಚಾಲ್ತಿಯಾಗಿ ಬಿಟ್ಟಿರುವ ಅಭ್ಯಾಸ, ಪದ್ಧತಿ ಯಾ ನಡವಳಿಕೆ: it is a trade to complain about the rain ಮಳೆಯನ್ನು ದೂರುವುದು ಒಂದು ರೂಢಿಯಾಗಿ ಬಿಟ್ಟಿದೆ.