traction ಟ್ರಾಕ್‍ಷನ್‍
ನಾಮವಾಚಕ
  1. (ಒಂದು ವಸ್ತುವನ್ನು ಒಂದು ಮೇಲ್ಮೈಯ ಮೇಲೆ) ಎಳೆಯುವುದು; ಎಳೆತ; ತುಯ್ತ; ಕರ್ಷಣ: electric traction ವಿದ್ಯುಚ್ಛಕ್ತಿಯಿಂದ ಎಳೆಯುವುದು. steam traction ಆವಿಯಿಂದ ಎಳೆಯುವುದು.
  2. ರಸ್ತೆಯ ಮೇಲೆ (ವಾಹನದ) ಟೈರಿನ ಹಿಡಿತ.
  3. ರೈಲು ಕಂಬಿಯ ಮೇಲೆ ಚಕ್ರದ ಹಿಡಿತ.
  4. (ವೈದ್ಯಶಾಸ್ತ್ರ) ಅಂಗಕರ್ಷಣ; ರೋಗಚಿಕಿತ್ಸೆಯ ಉದ್ದೇಶದಿಂದ ಅಂಗ ಮೊದಲಾದವನ್ನು ರಾಟೆ, ತೂಕ, ಮೊದಲಾದವುಗಳಿಂದ ದೀರ್ಘಕಾಲ ಎಳೆದಿರುವುದು, ಎಳೆದಿಡುವುದು.
  5. (ಸ್ನಾಯು ಮೊದಲಾದವುಗಳ) ಸಂಕೋಚನ; ಸೆಳೆತ.
  6. (ಅಮೆರಿಕನ್‍ ಪ್ರಯೋಗ) ಸಾರ್ವಜನಿಕ ಸಾರಿಗೆ ವ್ಯವಸ್ಥೆ.