tracer ಟ್ರೇಸರ್‍
ನಾಮವಾಚಕ
  1. (ಮುಖ್ಯವಾಗಿ ಸೈನ್ಯ) ಪಥದರ್ಶಕ ಕ್ಷಿಪಣಿ; ಹೊಗೆ ಯಾ ಜ್ವಾಲೆಯ ಮೂಲಕ ತನ್ನ ಪಥವನ್ನು ಗೋಲಂದಾಜರವನಿಗೆ ತೋರಿಸುವ ಕ್ಷಿಪಣಿ ಯಾ ಗುಂಡು.
    1. ರೇಖಕ; ಗೆರೆಯಿಂದ ಗುರುತು ಹಾಕುವ ವ್ಯಕ್ತಿ ಯಾ ಸಾಧನ.
    2. ಅನ್ವೇಷಕ; ಜಾಡುಹಿಡಿದು ಪತ್ತೆಹಚ್ಚುವ ವ್ಯಕ್ತಿ ಯಾ ಸಾಧನ.
  2. ಪಥಸೂಚಕ; ಪಥಸೂಚಿ; ರಾಸಾಯನಿಕ ಪ್ರಕ್ರಿಯೆಯಲ್ಲಿ, ಮುಖ್ಯವಾಗಿ ಜೀವಿಯೊಂದರ ದೇಹದಲ್ಲಿ ನಡೆಯುವ ಜೀವರಾಸಾಯನಿಕ ಪ್ರಕ್ರಿಯೆಯಲ್ಲಿ, ತನ್ನ ವಿಕಿರಣದ ನೆರವಿನಿಂದ ತಾನು ಕ್ರಮಿಸುವ ಜಾಡನ್ನು ಗುರುತಿಸಲು ಸಾಧ್ಯವಾಗುವಂತೆ ಮಾಡುವ ಕೃತಕ ವಿಕಿರಣಪಟು ಧಾತು.