See also 2toy  3toy
1toy ಟಾಯ್‍
ನಾಮವಾಚಕ
  1. (ಮುಖ್ಯವಾಗಿ ಮಗುವಿನ) ಆಟದ ಸಾಮಾನು; ಆಟಿಕೆ.
  2. ಥಳುಕಿನ ವಸ್ತು, ಒಡವೆ.
  3. ಆಟದ, ವಿನೋದದ ವಸ್ತು.
  4. (ಮುಖ್ಯವಾಗಿ ಆಟದ ಸಾಮಾನಾಗಿ ಬಳಸುವ) ಯಾವುದೇ ವಸ್ತುವಿನ ಸಣ್ಣ ಮಾದರಿ: toy gun ಆಟದ ಬಂದೂಕು.
  5. ಆಟ; ಗಂಭೀರವಾಗಿ ತೆಗೆದುಕೊಳ್ಳದೆ ಹಗುರವಾಗಿ ಪರಿಗಣಿಸಿದ ಕೆಲಸ: makes a toy of taking the examination ಪರೀಕ್ಷೆ ತೆಗೆದುಕೊಳ್ಳುವ ಆಟ ಆಡುತ್ತಿದ್ದಾನೆ, ಪರೀಕ್ಷೆಯನ್ನು ಆಟವಾಗಿ ತೆಗೆದುಕೊಂಡಿದ್ದಾನೆ, ಪರಿಗಣಿಸಿದ್ದಾನೆ.
See also 1toy  3toy
2toy ಟಾಯ್‍
ಗುಣವಾಚಕ
  1. ಆಟಿಕೆಯ; ಆಟದ ಸಾಮಾನಿನ: toy ship ಆಟದ ಹಡಗು.
  2. ಆಟದ; ಗಂಭೀರವಾಗಿ ಪರಿಗಣಿಸದ, ತೆಗೆದುಕೊಳ್ಳದ.
  3. (ನಾಯಿ ಮೊದಲಾದವುಗಳ ವಿಷಯದಲ್ಲಿ) ಮುದ್ದಿಗಾಗಿ ಯಾ ಅಪೂರ್ವತೆಗಾಗಿ ಸಾಕಿದ ಪುಟ್ಟ ಯಾ ಸಣ್ಣ ತಳಿಯ: toy dog ಪುಟ್ಟನಾಯಿ. toy spaniel ಸಣ್ಣ ಸ್ಪಾನಿಯಲ್‍ (ಜಾತಿ) ನಾಯಿ.
See also 1toy  2toy
3toy ಟಾಯ್‍
ಅಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ವ್ಯಕ್ತಿಯ ಭಾವನೆಯೊಂದಿಗೆ) ಆಟವಾಡು; ವಿನೋದವಾಡು; ಚೆಲ್ಲಾಟವಾಡು; ಹುಡುಗಾಟವಾಡು; ಲಘುವಾಗಿ, ಹುಡುಗಾಟಿಕೆಯಿಂದ ವರ್ತಿಸು: toys with the idea of going to America ಅಮೆರಿಕಕ್ಕೆ ಹೋಗುವ ಯೋಚನೆಯೊಂದಿಗೆ ಚೆಲ್ಲಾಟವಾಡುತ್ತಿದ್ದಾನೆ, ಅಮೆರಿಕಕ್ಕೆ ಹೋಗುವುದನ್ನು ಹಗುರವಾಗಿ ಯೋಚಿಸುತ್ತಿದ್ದಾನೆ.
    1. ಒಂದು ವಸ್ತುವನ್ನು ಸುಮ್ಮನೆ ಅತ್ತಿತ್ತ ಆಡಿಸು: toyed with her necklace ತನ್ನ ಕಂಠಿಯನ್ನು ಸುಮ್ಮನೆ ಅತ್ತಿತ್ತ ಆಡಿಸಿದಳು.
    2. ಆಟವಾಡುವಂತೆ ನಿರ್ವಹಿಸು; ಚೆಲ್ಲಾಟ ನಡೆಸು; ಬೇಕಾಬಿಟ್ಟಿಯಾಗಿ ನಡೆಸಿಕೊ: stop toying with your food ಆಹಾರದೊಡನೆ ಚೆಲ್ಲಾಟವಾಡಬೇಡ, ನಿಲ್ಲಿಸು (ತಿನ್ನುವುದನ್ನು ಬಿಟ್ಟು ಆಹಾರವನ್ನು ಸುಮ್ಮನೆ ಕುರುಕಬೇಡ).