township ಟೌನ್‍ಷಿಪ್‍
ನಾಮವಾಚಕ
  1. (ಬ್ರಿಟಿಷ್‍ ಪ್ರಯೋಗ) (ಚರಿತ್ರೆ)
    1. ‘ಮ್ಯಾನರ್‍’,‘ಪ್ಯಾರಿಷ್‍’, ಮೊದಲಾದವುಗಳ ನಿವಾಸಿಗಳು.
    2. (ಪ್ರಾದೇಶಿಕ ವಿಭಾಗವಾಗಿ) ‘ಮ್ಯಾನರ್‍’ ಯಾ ‘ಪ್ಯಾರಿಷ್‍’.
    3. ದೊಡ್ಡ ‘ಪ್ಯಾರಿಷ್‍’ ನ ಭಾಗವಾದ ಸಣ್ಣ ಊರು ಯಾ ಹಳ್ಳಿ.
    1. (ಅಮೆರಿಕನ್‍ ಪ್ರಯೋಗ ಮತ್ತು ಕೆನಡಾ) ಕೆಲವು ಸ್ಥಳೀಯ ಅಧಿಕಾರಗಳುಳ್ಳ ಜಿಲ್ಲೆಯ ಭಾಗ.
    2. ಉಪಜಿಲ್ಲೆ; ಆರು ಚದರ ಮೈಲಿಯಳತೆಯ, ಊರಿನ ವಿಭಾಗ.
  2. (ಆಸ್ಟ್ರೇಲಿಯ ಮತ್ತು ನ್ಯೂಸಿಲೆಂಡ್‍)
    1. ಸಣ್ಣ ಊರು, ಪಟ್ಟಣ.
    2. ಪಟ್ಟಣದ ನಿವೇಶನ.
  3. (ದಕ್ಷಿಣ ಆಹ್ರಿಕ)
    1. ಕರಿಯರ ಮೊಹಲ್ಲಾ, ಕೇರಿ; ಕರಿಯ ಜನ (ಮುಖ್ಯವಾಗಿ ಆಹ್ರಿಕದವರು) ವಾಸಿಸಲು ಮೀಸಲಾಗಿಟ್ಟ ಊರಿನ ಭಾಗ, ಪ್ರದೇಶ.
    2. ಬಿಳಿಯರ ಮೊಹಲ್ಲಾ, ಕೇರಿ; ಬಿಳಿಯ ಜನರ ವಾಸಕ್ಕಾಗಿ ಮೀಸಲಾಗಿಟ್ಟ ಊರಿನ ಭಾಗ.