See also 2towel
1towel ಟೌಅಲ್‍
ನಾಮವಾಚಕ
    1. (ಮೈ ಒರಸುವ) ಚೌಕ; ಟವಲು.
    2. ಒರೆಸುವ ಕಾಗದ; ಒರಸಲು ಬಳಸುವ ಹೀರುಕಾಗದ.
    3. ಒರಸುವ ಬಟ್ಟೆ; ತಟ್ಟೆ, ಪಾತ್ರೆ, ಮೊದಲಾದವುಗಳನ್ನು ಒರೆಸಲು ಬಳಸುವ ಬಟ್ಟೆ.
  1. (ಬ್ರಿಟಿಷ್‍ ಪ್ರಯೋಗ) = sanitary towel.
ಪದಗುಚ್ಛ

throw in the towel (ಮುಷ್ಟಿಕಾಳಗ ಯಾ ರೂಪಕವಾಗಿ) ಸೋಲು ಒಪ್ಪಿಕೊ; ‘ಸೋತೆ’ ಎನ್ನು.

See also 1towel
2towel ಟೌಅಲ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ towelled (ಅಮೆರಿಕನ್‍ ಪ್ರಯೋಗ toweled);
ಸಕರ್ಮಕ ಕ್ರಿಯಾಪದ
  1. ಟವಲಿನಿಂದ ಒರಸು.
  2. (ಅಶಿಷ್ಟ) ದೊಣ್ಣೆಯಿಂದ ಹೊಡೆ, ಸದೆಬಡಿ.
ಅಕರ್ಮಕ ಕ್ರಿಯಾಪದ

ಟವಲಿನಿಂದ ಮೈ ಒರಸಿಕೊ.