See also 2tow  3tow
1tow ಟೋ
ಸಕರ್ಮಕ ಕ್ರಿಯಾಪದ
  1. (ಹಡಗು, ಕುದುರೆ, ಮೊದಲಾದವುಗಳ ವಿಷಯದಲ್ಲಿ) ಹಗ್ಗದಿಂದ ಯಾ ಸರಪಣಿಯಿಂದ (ದೋಣಿ, ಗಾಡಿ, ಮೊದಲಾದವನ್ನು) ಉದ್ದಕ್ಕೂ ಎಳೆದುಕೊಂಡು ಹೋಗು.
  2. (ವಾಹನದ ವಿಷಯದಲ್ಲಿ) ತನ್ನ ಹಿಂದೆ ಕಟ್ಟಿದ ಇನ್ನೊಂದು ವಾಹನವನ್ನು ಎಳೆದುಕೊಂಡು ಹೋಗು.
  3. (ವ್ಯಕ್ತಿಯನ್ನು ಯಾ ವಸ್ತುವನ್ನು) ತನ್ನ ಹಿಂದೆ ಎಳೆದುಕೊಂಡು ಹೋಗು.
See also 1tow  3tow
2tow ಟೋ
ನಾಮವಾಚಕ

ಹಿಂದೆ ಎಳೆದುಕೊಂಡು ಹೋಗುವುದು ಯಾ ಹಾಗೆ ಎಳೆಯಲ್ಪಡುವುದು.

ಪದಗುಚ್ಛ

have in (or on) tow

  1. ಹೀಗೆ ಎಳೆದುಕೊಂಡು ಹೋಗು.
  2. (ವಶಕ್ಕೆ ತೆಗೆದುಕೊಂಡು) ಜತೆಯಲ್ಲಿ ಕರೆದೊಯ್ಯಿ, ಎಳೆದುಕೊಂಡು ಹೋಗು.
See also 1tow  2tow
3tow ಟೋ
ನಾಮವಾಚಕ
  1. (ನೆಯ್ಗೆಗೆ ಸಿದ್ಧಪಡಿಸಿದ) ಕಿತ್ತಾನಾರು; ತುಂಡು ನಾರು; ನೇಯಲು ಸಿದ್ಧಪಡಿಸಿದ ಅಗಸೆಯ ಯಾ ಸೆಬಉ ನಾರಿನ ಒರಟು ತುಂಡು ಯಾ ದಾರ.
  2. (ರೇಯಾನ್‍ ಮೊದಲಾದವುಗಳ) ಸಡಿಲ ಎಳೆಗಳ ಗೊಂಚಲು.