See also 2tough
1tough ಟಹ್‍
ಗುಣವಾಚಕ
  1. ಗಡುಸಾದ; ಗಟ್ಟಿಯಾದ; ಕಠಿಣವಾದ; ಮುರಿಯಲು, ಸೀಳಲು, ಕಡಿಯಲು, ಹರಿಯಲು ಯಾ ಅಗಿಯಲು–ಕಷ್ಟವಾದ.
  2. (ಜೇಡಿಮಣ್ಣು ಮೊದಲಾದವು) ಜಿಗುಟಾದ; ಬಿಗುಪಿನ.
  3. ಕಷ್ಟಸಹಿಷ್ಣುವಾದ; ಗಟ್ಟಿಮುಟ್ಟಾದ; ದೇಹದಾರ್ಢ್ಯವುಳ್ಳ.
  4. ಕಷ್ಟಸಾಧ್ಯವಾದ; ಬಗ್ಗದ; ಸಗ್ಗದ; ಛಲವುಳ್ಳ; ಅಚಲ; ದೃಢ: he is a tough customer ಅವನು ಸುಲಭವಾಗಿ ಬಗ್ಗದ ಗಿರಾಕಿ. found it a tough job ಅದು ಕಷ್ಟಸಾಧ್ಯವಾದ ಕೆಲಸವೆನಿಸಿತು.
  5. (ಆಡುಮಾತು) (ಪರಿಸ್ಥಿತಿ, ಅದೃಷ್ಟ, ಮೊದಲಾದವುಗಳ ವಿಷಯದಲ್ಲಿ) ಕ್ರೂರ; ಉಗ್ರ; ಸಹಿಸಲಾಗದ; ದುಸ್ಸಹ.
  6. (ಆಡುಮಾತು) ಗೂಂಡಾತನದ; ಕೇಡಿಗತನದ; ಪುಂಡತನದ; ಘಾತುಕತನದ: tough guys ಗೂಂಡಾಗಳು.
  7. (ಆಡುಮಾತು) ಕಠಿನ; ಕಠೋರ; ನಿಷ್ಠುರ; ಬಹಳ ಕಟ್ಟುನಿಟ್ಟಿನ: get tough with ಕಠಿನವಾಗು.
ಪದಗುಚ್ಛ
  1. tough it (or it out) (ಆಡುಮಾತು) ಕಷ್ಟಪರಿಸ್ಥಿತಿಗಳನ್ನು ಎದುರಿಸು ಯಾ ಸಹಿಸಿಕೊ.
See also 1tough
2tough ಟಹ್‍
ನಾಮವಾಚಕ

ಬೀದಿಯ ಪುಂಡ; ಗೂಂಡಾ.