See also 2toss
1toss ಟಾಸ್‍
ಸಕರ್ಮಕ ಕ್ರಿಯಾಪದ
  1. (ಚೆಂಡು ಮೊದಲಾದವನ್ನು ಮುಖ್ಯವಾಗಿ ಕೈಯಿಂದ) ಮೇಲಕ್ಕೆ–ಎಸೆ, ಚಿಮ್ಮು, ಹಾರಿಸು.
    1. (ಗೂಳಿ ಮೊದಲಾದವು) ಕೊಂಬಿನಿಂದ–ಎತ್ತಿಹಾಕು, ಕೆಡವು, ಕೆಳಕ್ಕುರುಳಿಸು.
    2. (ಕುದುರೆ ಮೊದಲಾದವುಗಳ ವಿಷಯದಲ್ಲಿ) (ಸವಾರನನ್ನು) ಬೆನ್ನಮೇಲಿಂದ ಕೆಡವು, ಬೀಳಿಸು.
  2. (ಏನನ್ನಾದರೂ, ಒಬ್ಬನ ಕಡೆ) ಲಾಘವವಾಗಿ, ಅಸಡ್ಡೆಯಿಂದ–ಎಸೆ, ಬಿಸಾಡು, ಒಗೆ: tossed the letter away ಕಾಗದವನ್ನು ಅಸಡ್ಡೆಯಿಂದ ಎಸೆದ.
  3. (ಏನನ್ನಾದರೂ ನಿರ್ಧರಿಸಲು ನಾಣ್ಯವನ್ನು) ಮೇಲಕ್ಕೆ ಚಿಮ್ಮು, ಮಿಡಿ, ಮೀಟು.
  4. (ನಾಣ್ಯ) ಚಿಮ್ಮಿ ನಿರ್ಧರಿಸು: will toss you for the armchair ಆರಾಮಕುರ್ಚಿಯಲ್ಲಿ ನೀನೇ ಕುಳಿತುಕೊಳ್ಳಬೇಕೆ ಎಂಬಉದನ್ನು ನಾಣ್ಯ ಚಿಮ್ಮಿ ನಿರ್ಧರಿಸುವೆ.
  5. (ಏನನ್ನಾದರೂ) ಅತ್ತಿತ್ತ ಉರುಳಾಡಿಸು; ಹೊರಳಾಡಿಸು.
  6. (ಆಹಾರ) ಪಾತ್ರೆಯನ್ನು ಅತ್ತಿತ್ತ ಮೆಲ್ಲನೆ ಅಲ್ಲಾಡಿಸಿ ಒಳಗಿನ ಪದಾರ್ಥಕ್ಕೆ (ಮಸಾಲೆ ಮೊದಲಾದವು) ಹತ್ತುವಂತೆ ಮಾಡು.
  7. (ತಲೆಯನ್ನು) ಹಿಂದಕ್ಕೆ ಎಸೆ ಯಾ ಕೊಡವು: tossed her head angrily ಕೋಪದಿಂದ ತಲೆಕೊಡವಿದಳು.
  8. ಚರ್ಚೆಯಲ್ಲಿ ತೊಡಗು; ಚರ್ಚಿಸು: tossed the question back and forth ಸಮಸ್ಯೆಯನ್ನು ಹಿಂದಕ್ಕೂ ಮುಂದಕ್ಕೂ ಎಳೆದಾಡಿದ.
ಅಕರ್ಮಕ ಕ್ರಿಯಾಪದ
  1. (ಹಾಸಿಗೆಯಲ್ಲಿ ಪಕ್ಕದಿಂದ ಪಕ್ಕಕ್ಕೆ) ಉರುಳಾಡು; ಹೊರಳಾಡು: was tossing and turning all night ರಾತ್ರಿಯೆಲ್ಲಾ ಹೊರಳಾಡುತ್ತಾ ಇದ್ದ.
  2. (ಹಡಗು, ಸಮುದ್ರ, ಮರದ ಕೊಂಬೆ, ಮೊದಲಾದವು) ಅತ್ತಿತ್ತ ಹೊಯ್ದಾಡು, ತೂಗಾಡು: the ship was tossing on the sea ಹಡಗು ಸಮುದ್ರದ ಮೇಲೆ ಹೊಯ್ದಾಡುತ್ತಿತ್ತು.
ಪದಗುಚ್ಛ
  1. toss a pancake ದೋಸೆಯನ್ನು ಚಿಮ್ಮಿ ಕಾವಲಿಯ ಮೇಲೆ ಮಗುಚಿ ಹಾಕು.
  2. toss (person) in blanket (ಒಬ್ಬನನ್ನು) ಕಂಬಳಿಯಲ್ಲಿ ಹಾಕಿ ಚಿಮ್ಮಲಾಡು; ಕಂಬಳಿಯ ನಾಲ್ಕು ಮೂಲೆಗಳನ್ನು ತಟಕ್ಕನೆ ಎಳೆದು ಅದರಲ್ಲಿದ್ದವನನ್ನು ಮೇಲಕ್ಕೆ ಚಿಮ್ಮು.
  3. toss oars (ಹುಟ್ಟು ಹಾಕುವವರ ವಿಷಯದಲ್ಲಿ) ದೋಣಿಯ ಹುಟ್ಟುಗಳನ್ನು, ನೆಟ್ಟಗೆ ಹಿಡಿ, ನೆಟ್ಟಗೆ ಮೇಲಕ್ಕೆತ್ತಿ ಹಿಡಿದು ವಂದಿಸು.
  4. toss off
    1. ಒಂದೇ ಗುಟುಕಿಗೆ ಕುಡಿದುಬಿಡು.
    2. (ಕೆಲಸವನ್ನು) ಬೇಗನೆ ಯಾ ಅನಾಯಾಸವಾಗಿ ಮುಗಿಸಿಬಿಡು: tossed off an omelette ಒಂದು ಆಮ್ಲೆಟ್ಟನ್ನು ಅನಾಯಾಸವಾಗಿ ಮಾಡಿಬಿಟ್ಟ.
    3. (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ಮುಷ್ಟಿ ಮೈಥುನ ಮಾಡು.
  5. toss one’s head (ತಿರಸ್ಕಾರ, ಅಸಹನೆ, ಮೊದಲಾದವುಗಳಿಂದ) ತಲೆಯನ್ನು ಹಿಂದಕ್ಕೆ ಕೊಡವು, ಎಸೆ.
  6. tossing the caber ಮರದ ಕೊಂಟನ್ನು ಯಾ ಕೊರಡನ್ನು ಎಸೆಯುವ ಸ್ಕಾಟ್ಲೆಂಡಿನ ಒಂದು ಆಟ.
  7. toss up (ಆಯ್ಕೆಯನ್ನು ತೀರ್ಮಾನ ಮಾಡಲು) (ನಾಣ್ಯವನ್ನು) ಮೇಲಕ್ಕೆ ಚಿಮ್ಮು.
See also 1toss
2toss ಟಾಸ್‍
ನಾಮವಾಚಕ
    1. (ನಾಣ್ಯ ಮೊದಲಾದವನ್ನು) ಚಿಮ್ಮುವುದು; ಎಸೆಯುವುದು.
    2. (ತಲೆಯನ್ನು) ಹಿಂದಕ್ಕೆಸೆಯುವುದು; ಕೊಡವುವುದು.
  1. ಚಿಮ್ಮು; ಎಸೆತ.
  2. ಹೊಯ್ದಾಟ; ತೂಗಾಟ; ಹೊರಳಾಟ.
  3. ಕ್ಷೋಭೆ; ಕುಲಕಾಟ.
  4. (ಬ್ರಿಟಿಷ್‍ ಪ್ರಯೋಗ) (ಮುಖ್ಯವಾಗಿ ಕುದುರೆಯ ಮೇಲಿನಿಂದ) ಕೆಳಕ್ಕೆ ಉರುಳುವುದು, ಬೀಳುವುದು.
ಪದಗುಚ್ಛ
  1. argue the toss ನಾಣ್ಯದ ಚಿಮ್ಮನ್ನು ಕುರಿತು ವಿವಾದವೆಬ್ಬಿಸು.
  2. full toss (ಕ್ರಿಕೆಟ್‍) ಪೂರಾ ಚೆಂಡೆಸೆತ; ವಿಕೆಟ್ಟುಗಳ ನಡುವೆ ಎಲ್ಲಿಯೂ ನೆಲವನ್ನು ಮುಟ್ಟದ ಚೆಂಡೆಸೆತ.
  3. lose the toss ‘ಟಾಸ್‍’ ಸೋಲು; (ನಾಣ್ಯ ಚಿಮ್ಮಿ) ಆಯ್ಕೆಯ ನಿರ್ಣಯದ ಅಧಿಕಾರ ಕಳೆದುಕೊ; ಅನನುಕೂಲ ಸ್ಥಿತಿ ಪಡೆ.
  4. take a toss ಕೆಳಕ್ಕೆಸೆಯಲಾಗು, ಬೀಳು.
  5. win the toss ‘ಟಾಸ್‍’ ಗೆಲ್ಲು; (ನಾಣ್ಯ ಚಿಮ್ಮಿ) ಆಯ್ಕೆಯ ನಿರ್ಣಯದ ಅಧಿಕಾರ ಪಡೆ; ಅನುಕೂಲ ಸ್ಥಿತಿ ಪಡೆ.