torrent ಟಾರಂಟ್‍
ನಾಮವಾಚಕ
  1. (ನೀರು, ಲಾವಾರಸ, ಮೊದಲಾದವುಗಳ) ರಭಸ ಪ್ರವಾಹ; ನುಗ್ಗು ಹೊನಲು; ನಿರ್ಝರ.
  2. (ಬಹುವಚನದಲ್ಲಿ) ಸುರಿಮಳೆ; ಜಡಿಮಳೆ; ಕುಂಭದ್ರೋಣದ, ಧಾರಾಕಾರದ ಮಳೆ: rain came down in torrents ಧಾರಾಕಾರವಾಗಿ ಮಳೆ ಸುರಿಯಿತು.
  3. (ರೂಪಕವಾಗಿ) (ಬೈಗುಳ, ದುಃಖ, ಗೋಳು, ಪ್ರಶ್ನೆಗಳು, ಮೊದಲಾದವುಗಳ) ಸುರಿಮಳೆ; ಬಿರುಸಿನ ಹೊಡೆತ; ಬಿರುಮಳೆ: torrent of abuse ಬೈಗುಳದ ಸುರಿಮಳೆ.