topical ಟಾಪಿಕಲ್‍
ಗುಣವಾಚಕ
  1. ಪ್ರಾಸಂಗಿಕ; ಪ್ರಾಕರಣಿಕ; ವಸ್ತು, ವಿಷಯ, ಪ್ರಕರಣಗಳಿಗೆ ಸಂಬಂಧಿಸಿದ.
  2. (ಮುಖ್ಯವಾಗಿ) ಸ್ಥಳೀಯ; ಸ್ಥಳೀಕ.
  3. ಪ್ರಚಲಿತ ವಸ್ತು, ವಿಷಯಗಳಿಗೆ ಸಂಬಂಧಿಸಿದ; ಸಾಮಯಿಕ: a topical song ಸಾಮಯಿಕ (ವಿಷಯಕ್ಕೆ ಸಂಬಂಧಿಸಿದ) ಹಾಡು.
  4. (ವೈದ್ಯಶಾಸ್ತ್ರ) (ರೋಗ, ಔಷಧಿ, ಮೊದಲಾದವುಗಳ ವಿಷಯದಲ್ಲಿ) ಸ್ಥಳೀಕ; ಶರೀರದ ಒಂದು ಭಾಗಕ್ಕೆ ಮಾತ್ರ ಸಂಬಂಧಿಸಿದ.