See also 2tongue
1tongue ಟಂಗ್‍
ನಾಮವಾಚಕ
  1. ನಾಲಿಗೆ; ಜಿಹ್ವೆ; ರಸನ.
  2. (ಮಾಂಸವಾಗಿ ತಿನ್ನುವ) ದನ ಮೊದಲಾದವುಗಳ ನಾಲಿಗೆ.
  3. ಮಾತು; ವಾಕ್‍ಶಕ್ತಿ: has a ready tongue ಅವನಿಗೆ ಚುರುಕಾದ ವಾಕ್‍ಶಕ್ತಿ ಇದೆ; ಅವನು ಚುರುಕಾಗಿ ಮಾತನಾಡಬಲ್ಲ.
  4. (ಒಂದು ದೇಶ, ಜನಾಂಗ, ಮೊದಲಾದವುಗಳ) ಭಾಷೆ; ನುಡಿ: the German tongue ಜರ್ಮನ್‍ ಭಾಷೆ.
  5. (ಕಾರ್ಯ, ಆಕಾರ, ಮೊದಲಾದವುಗಳಲ್ಲಿ) ನಾಲಗೆಯಂಥ, ನಾಲಗೆಯಾಕಾರದ ವಸ್ತು (ಉದಾಹರಣೆಗೆ ಉದ್ದಕ್ಕೆ ಚಾಚಿದ ಭೂಶಿರ, ಪಾದರಕ್ಷೆಯ ಮುಂದಿನ ಮೇಲ್ಭಾಗದ ತೆರಪನ್ನು ಮುಚ್ಚುವ ತೊಗಲಪಟ್ಟಿ, ಗಂಟೆಯ ನಾಲಗೆ, ಬಂಧನಿಯ ಕೊಕ್ಕೆಮೊಳೆ, ಗಾಡಿ ತೋಡಿರುವ ಎರಡು ಹಲಗೆ ಮೊದಲಾದವನ್ನು ಕೂಡಿಸಿದ ಅಡ್ಡಪಟ್ಟಿ, ತಕ್ಕಡಿಯ ಸೂಚಿಮುಳ್ಳು, ವಾದ್ಯದ ಕಂಪನಪಟ್ಟಿ, ಜ್ವಾಲೆಯ ಚಿಮ್ಮುಲು, ಉರಿಯ ನಾಲಗೆ, ರೈಲಿನ ಕೀಲುಕಂಬಿಯ ಮೊನೆಗಂಬಿ, ಮೊದಲಾದವು).
ಪದಗುಚ್ಛ
  1. find one’s tongue (ಅತಿಯಾದ ಆಶ್ಚರ್ಯ, ಲಜ್ಜೆ, ಆಘಾತ, ಮೊದಲಾದವುಗಳಿಂದ) ಮೊದಲು ಮಾತನಾಡದಂತಾಗಿ ಆಮೇಲೆ ಮಾತನಾಡು, ಮಾತು ಹೊರಡು.
  2. give tongue
    1. (ಬೇಟೆ ನಾಯಿಗಳ ವಿಷಯದಲ್ಲಿ) (ಮುಖ್ಯವಾಗಿ ಬೇಟೆ ವಾಸನೆ ಕಂಡಾಗ) ಬಗುಳು.
    2. ಗಟ್ಟಿಯಾಗಿ (ಎಲ್ಲರಿಗೂ ಕೇಳಿಸುವಂತೆ)–ಮಾತನಾಡು, ವ್ಯಕ್ತಪಡಿಸು.
  3. have lost one’s tongue (ಮಿತಿಮೀರಿದ ಆಶ್ಚರ್ಯ ಆಘಾತ ಯಾ ಲಜ್ಜೆಯಿಂದ) ಮಾತನಾಡದಂತಾಗು; ನಾಲಿಗೆ ಕಟ್ಟಿದಂತಾಗು; ಬಾಯಿ ಕಟ್ಟಿದ ಹಾಗೆ ಆಗು.
  4. have (or speak with) one’s tongue in one’s cheek
    1. ವ್ಯಂಗ್ಯವಾಗಿ ಮಾತನಾಡು.
    2. ವಂಚನೆಯ ಮಾತನಾಡು; ಒಳಗೊಂದು (ಇಟ್ಟುಕೊಂಡು) ಹೊರಗೊಂದು ಮಾತನಾಡು.
  5. hold one’s tongue ನಾಲಿಗೆ ಬಿಗಿ ಹಿಡಿದಿರು; ಮಾತನಾಡದಿರು; ಮೌನವಾಗಿರು.
  6. keep a civil tongue in one’s head ವಿನಯವಾಗಿ ಯಾ ಮರ್ಯಾದೆಯಿಂದ ಮಾತನಾಡು.
  7. put out one’s tongue (ಹಲ್ಲು ಕಿರಿಯುವಾಗ ಯಾ ವೈದ್ಯ ಪರೀಕ್ಷೆಯಲ್ಲಿ) ನಾಲಿಗೆ ನೀಡು, ಚಾಚು.
  8. sharp tongue ಹರಿತ ನಾಲಿಗೆ; (ಕಟುವಾಗಿ) ಖಾರವಾಗಿ ಮಾತನಾಡುವಿಕೆ.
  9. the gift of tongues (ಪ್ರಾಚೀನ ಕ್ರೈಸ್ತ ಜನಾಂಗದವರಿಗೆ ಪವಾಡ ರೂಪದಲ್ಲಿ ಬಂದಿತೆನ್ನಲಾದ ಯಾ ಕೆಲವು ಆಧುನಿಕ ಜನಾಂಗಗಳು ತಮಗೆ ಲಭಿಸಿದೆ ಎಂದು ಹೇಳಿಕೊಳ್ಳುವ) ಅಪರಿಚಿತ ಭಾಷೆಗಳ ಜ್ಞಾನ, ಅವುಗಳನ್ನಾಡುವ ಶಕ್ತಿ.
  10. wag one’s tongue ನಾಲಿಗೆ ಆಡಿಸು; ಅತಿಯಾಗಿ ಯಾ ಹಿಂದುಮುಂದು ನೋಡದೆ–ಮಾತನಾಡು, ಹರಟು, ಗಳಹು.
  11. with one’s tongue hanging out
    1. ಬಾಯಾರಿದ; ನೀರಡಿಕೆಯ.
    2. (ರೂಪಕವಾಗಿ) ಕಾತರದಿಂದ; ನಿರೀಕ್ಷೆಯಿಂದ; ಆಸೆಯಿಂದ.
See also 1tongue
2tongue ಟಂಗ್‍
ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ tongues; ಭೂತರೂಪ ಮತ್ತು ಭೂತಕೃದಂತ tongued;

ವರ್ತಮಾನ ಕೃದಂತ tonguing).

ಸಕರ್ಮಕ ಕ್ರಿಯಾಪದ

(ಕೊಳಲು ಮೊದಲಾದವನ್ನು ನುಡಿಸುವಾಗ) ನಾಲಗೆಯಾಡಿಸಿ ಬಿಟ್ಟುಬಿಟ್ಟು–ನುಡಿಸು.

ಅಕರ್ಮಕ ಕ್ರಿಯಾಪದ

(ಬಿಟ್ಟುಬಿಟ್ಟು ನುಡಿಯುವಂತೆ) ನಾಲಗೆಯಾಡಿಸು.