See also 2toll  3toll
1toll ಟೋಲ್‍
ನಾಮವಾಚಕ
  1. (ಪೇಟೆ, ರಸ್ತೆ, ಮೊದಲಾದವನ್ನು ಬಳಸಿಕೊಳ್ಳಲು ಯಾ ಸಲ್ಲಿಸಿದ ಸೇವೆಗಾಗಿ ಕೊಡುವ) ಸುಂಕ; ಜಕಾತಿ; ಟೋಲು.
  2. (ಅಮೆರಿಕನ್‍ ಪ್ರಯೋಗ) (ದೂರವಾಣಿಯಲ್ಲಿ ದೂರಸಂಪರ್ಕದ ಕರೆ ಮಾಡಿದಾಗ ತೆರಬೇಕಾದ) ಶುಲ್ಕ; ರುಸುಮು.
  3. (ಏನನ್ನಾದರೂ ಸಾಧಿಸುವಾಗ ಯಾ ಅಪಘಾತ, ಯುದ್ಧ, ಮೊದಲಾದವುಗಳಿಂದ ಉಂಟಾದ) ಹಾನಿಯ ಯಾ ನಷ್ಟದ ಮೊತ್ತ: death toll ಸತ್ತವರ ಸಂಖ್ಯೆ, ಮೊತ್ತ.
ಪದಗುಚ್ಛ
  1. take its toll ನಷ್ಟ, ಹಾನಿ, ಮೊದಲಾದವನ್ನು ಉಂಟುಮಾಡು.
  2. toll thorough (ಬ್ರಿಟಿಷ್‍ ಪ್ರಯೋಗ) (ನ್ಯಾಯಶಾಸ್ತ್ರ) ದಾರಿಸುಂಕ; ಭಾಟಾ ಸುಂಕ; ಸೇತುವೆ, ರಸ್ತೆ, ಮೊದಲಾದವುಗಳನ್ನು ಬಳಸಲು ವಾಹನಾದಿಗಳು ಕೊಡಬೇಕಾದ ಸುಂಕ.
  3. toll traverse (ಬ್ರಿಟಿಷ್‍ ಪ್ರಯೋಗ) ಹಾಯು ಸುಂಕ; ದಾಟು ಸುಂಕ; ಖಾಸಗಿ ಮೀನಿನ ಮೇಲೆ ಹಾದುಹೋಗಲು ಕೊಡಬೇಕಾದ ತೆರ.
See also 1toll  3toll
2toll ಟೋಲ್‍
ಸಕರ್ಮಕ ಕ್ರಿಯಾಪದ
  1. (ಘಂಟೆಯನ್ನು) ಒಂದೇ ಸಮನೆ ನಿಧಾನವಾಗಿ ಬಾರಿಸುತ್ತಿರು.
  2. (ಘಂಟೆ ಯಾ ಗಡಿಯಾರದ ವಿಷಯದಲ್ಲಿ, ಹೊತ್ತಿನ ಘಂಟೆ ಮೊದಲಾದವನ್ನು) ಹೊಡೆ; ಬಾರಿಸು.
  3. ಮರಣ (ಸೂಚಕ) ಘಂಟೆ ಹೊಡೆ ಯಾ ಬಾರಿಸು.
ಅಕರ್ಮಕ ಕ್ರಿಯಾಪದ

(ಗಂಟೆಯ ವಿಷಯದಲ್ಲಿ) ಒಂದೇ ಸಮನೆ ನಿಧಾನವಾಗಿ ಹೊಡೆಯುತ್ತಿರು.

See also 1toll  2toll
3toll ಟೋಲ್‍
ನಾಮವಾಚಕ

ಗಂಟೆ–ಹೊಡೆತ, ಬಾಜಣೆ; ಘಂಟಾ–ವಾದನ, ನಾದ, ಘೋಷ.