tolerate ಟಾಲರೇಟ್‍
ಸಕರ್ಮಕ ಕ್ರಿಯಾಪದ
  1. ತಾಳು; ತಾಳಿಕೊ; ಸೈರಿಸು; ಸಹಿಸು; ತಾಳ್ಮೆಯಿಂದಿರು.
  2. (ವ್ಯಕ್ತಿ, ಅಭಿಪ್ರಾಯ, ಮತಧರ್ಮ, ಮೊದಲಾದವುಗಳ ವಿಷಯದಲ್ಲಿ) ಸಹಿಷ್ಣುವಾಗಿರು; ಸಹನೆ ತೋರು.
  3. (ಸಂಕಟ, ನೋವು, ಮೊದಲಾದವನ್ನು) ತಡೆದುಕೊ; ಸಹಿಸು; ಸೈರಿಸು.
  4. (ವೈದ್ಯಶಾಸ್ತ್ರ) (ಔಷಧಿ, ವಿಕಿರಣ, ಮೊದಲಾದವುಗಳ ಬಳಕೆಯ) ಪರಿಣಾಮವನ್ನು ತೊಂದರೆಯಿಲ್ಲದೆ ತಡೆದುಕೊ ಯಾ ತಡೆದುಕೊಳ್ಳಲು ಶಕ್ತಿಯಿರು.
  5. ಸಹ್ಯವೆಂದು–ಎಣಿಸು, ಪರಿಗಣಿಸು.
  6. (ಅಧಿಕೃತ ಅಡಚಣೆ ಮಾಡದೆ) ಇರುವಂತೆ ಯಾ ನಡೆಯುವಂತೆ ಬಿಡು.
  7. ಹಾಳು ಮಾಡದಿರು; ಪೀಡಿಸದಿರು.