See also 2token
1token ಟೋಕನ್‍
ನಾಮವಾಚಕ
  1. (ಪ್ರೀತಿ ಮೊದಲಾದವುಗಳ) ಗುರುತು; ಕುರುಹು; ಚಿಹ್ನೆ; ಸಂಕೇತ: in token of my esteem ನನ್ನ ಗೌರವದ ಸಂಕೇತವಾಗಿ.
  2. (ಪ್ರಾಮಾಣ್ಯಕ್ಕೆ ನಿದರ್ಶನವಾದ) ಗುರುತು ಬಿಲ್ಲೆ, ನಾಣ್ಯ, ಉಂಗುರ, ಮೊದಲಾದವು.
  3. (ವಿಶಿಷ್ಟ ಅಂಗಡಿ ಮೊದಲಾದ ಕಡೆ ಗೊತ್ತಾದ ವಸ್ತು ಮೊದಲಾದವನ್ನು ವಿನಿಮಯ ಮಾಡಿಕೊಳ್ಳಲು ಕೊಡುವ) ಟೋಕನ್ನು; ಚೀಟಿ; ಟಿಕೆಟ್ಟು.
  4. (ಚರಿತ್ರೆ) ಅನಧಿಕೃತ (ಚಲಾವಣೆ) ನಾಣ್ಯ; ನಾಣ್ಯದಂಥ ಯಾ ನಾಣ್ಯದ ಬದಲು ಬಳಸುವ, ಅದರ ಮುದ್ರಿತ ಬೆಲೆಯು ಆಂತರಿಕ ಬೆಲೆಗಿಂತ ಹೆಚ್ಚಾಗಿರುವ, ಬ್ಯಾಂಕು, ವರ್ತಕರು, ಮೊದಲಾದವರು ಚಲಾವಣೆ ಮಾಡುತ್ತಿದ್ದ, ಸರ್ಕಾರದಿಂದ ಅಧಿಕಾರ ಪಡೆಯದಿದ್ದ, ಲೋಹದ ಬಿಲ್ಲೆ.
  5. (ನಗದು ಹಣ ಚಲಾವಣೆ ಇಲ್ಲದ ಕಡೆ ಬಳಸುವ ಯಾ ಯಂತ್ರದೊಳಕ್ಕೆ ಹಾಕುವ) ನಾಣ್ಯದಂಥ ಬಿಲ್ಲೆ.
ಪದಗುಚ್ಛ
    1. by this (or the same) token ಅದೇ ರೀತಿ; ಅಂತೆಯೇ; ಅದೇ ಕಾರಣದಿಂದ.
    2. ಜೊತೆಗೆ; ಮತ್ತೂ.
    3. (ಪ್ರಾಚೀನ ಪ್ರಯೋಗ) ಹೇಳಿದ್ದನ್ನು ದೃಢೀಕರಿಸಲು.
  1. in token of ಗುರುತಾಗಿ; ಸೂಚಕವಾಗಿ; ಸಂಕೇತವಾಗಿ.
See also 1token
2token
ಗುಣವಾಚಕ
  1. ಗುರುತಾದ; ಸೂಚಕ; ಕುರುಹಾದ; ಚಿಹ್ನೆಯಾದ; ಸಂಕೇತವಾದ.
    1. ಸಾಂಕೇತಿಕವಾದ: token strike ಭಾವದ, ಭಾವನೆಯ ತೀವ್ರತೆಯನ್ನು ಪ್ರಕಟಿಸಲು ಅಲ್ಪಕಾಲಾವಧಿ ಮಾಡಿದ, ನಡೆಸಿದ ಸಾಂಕೇತಿಕ ಮುಷ್ಕರ.
    2. ಒಂದು ತತ್ತ್ವವನ್ನು ಒಪ್ಪಿಕೊಂಡದ್ದನ್ನು ಮಾತ್ರ ಸೂಚಿಸುವ: token payment ಸಾಂಕೇತಿಕ (ಹಣ)ಸಂದಾಯ, ಸಲ್ಲಿಕೆ.
    3. ಪ್ರಾತಿನಿಧಿಕ ಮಾತ್ರದ; ನಿರ್ದಿಷ್ಟ ವರ್ಗವೊಂದನ್ನು ಕೇವಲ ಪ್ರತಿನಿಧಿಸುವ: token woman on the committee ಸಮಿತಿಯಲ್ಲಿ ಸ್ತ್ರೀಯರ ಕೇವಲ ಪ್ರಾತಿನಿಧಿಕ ಸದಸ್ಯೆ.
  2. ಕೇವಲ ಹೆಸರಿನ; ನಾಮಮಾತ್ರದ; ನಾಮಕಾವಾಸ್ತೆಯ: token effort ನಾಮಮಾತ್ರದ ಪ್ರಯತ್ನ.
  3. ಮಾದರಿಯಾದ; ನಮೂನೆಯ: token copy ಮಾದರಿ ಪ್ರತಿ.