toilet ಟಾಇಲಿಟ್‍
ನಾಮವಾಚಕ
  1. ಪ್ರಸಾಧನ; ಸ್ನಾನಮಾಡಿ ತಲೆಬಾಚಿಕೊಂಡು ಅಲಂಕಾರ ಮಾಡಿಕೊಳ್ಳುವುದು: make one’s toilet ಪ್ರಸಾಧನ ಮಾಡಿಕೊ.
  2. (ಪ್ರಾಚೀನ ಪ್ರಯೋಗ) ಬಟ್ಟೆ, ಉಡುಪು (ಧರಿಸುವ ರೀತಿ); ವೇಷಭೂಷಣ: an elaborate toilet ಪರಿಷ್ಕಾರಪೂರ್ಣವಾದ ವೇಷಭೂಷಣ. a toilet of white satin ಬಿಳಿ ಸ್ಯಾಟಿನ್‍ ಬಟ್ಟೆಯ ಉಡುಪು.
  3. ಶೌಚಾಲಯ (ಕೊಠಡಿ).
  4. (ವೈದ್ಯಶಾಸ್ತ್ರ) ತೊಳೆತ; ಮಾರ್ಜನ; ಪ್ರಸವವಾದ ನಂತರ ಯಾ ಶಸ್ತ್ರಚಿಕಿತ್ಸೆಯ ನಂತರ ಆ ಭಾಗವನ್ನು ತೊಳೆಯುವುದು.