See also 2toggle
1toggle ಟಾಗ(ಗ್‍)ಲ್‍
ನಾಮವಾಚಕ
  1. ಕಣ್ಣಿಯ ಬೆಣೆ, ಗೂಟ; ಕುಣಿಕೆ, ಉಂಗುರ, ಮೊದಲಾದವು ಜಾರದಂತೆ ತಡೆಯಲು ಹಗ್ಗದ ಕಣ್ಣಿಯಲ್ಲಿ ತೂರಿಸಿದ ಅಡ್ಡ ಬೆಣೆ, ಗೂಟ.
  2. (ತೂತು ಯಾ ಕುಣಿಕೆಯಲ್ಲಿ ಒಂದು ಕಡೆ ಮಾತ್ರ ತೂರಿಸಬಲ್ಲ ಯಾ ಜಾರಿಸಬಲ್ಲ, ಬೇರೆಬೇರೆ ಹಗ್ಗ ಮೊದಲಾದವನ್ನು ಕಟ್ಟಬಹುದಾದ) ಅಡ್ಡಬೆಣೆಯ ಸಾಧನ.
  3. ಈಟಿ ಗಾಳದ ತಿರುಗಾಣಿ ಕೊಕ್ಕೆ, ಮುಳ್ಳು.
  4. ಅಡ್ಡಕಡ್ಡಿ; ಒಂದು ದಿಕ್ಕಿನಲ್ಲಿ ತೂತಿನ ಯಾ ಕುಣಿಕೆಯ ಮೂಲಕ ತೂರುವ ಮತ್ತು ಇನ್ನೊಂದು ದಿಕ್ಕಿನಲ್ಲಿ ತೂರದ ಅಡ್ಡಕಂಬಿಯುಳ್ಳ (ಮುಖ್ಯವಾಗಿ ಉಡುಪನ್ನು) ಭದ್ರವಾಗಿ ಹಿಡಿದಿಡುವ ಸಾಧನ.
  5. (ಕಂಪ್ಯೂಟರ್‍) ಟಾಗ್‍ಲ್‍; ಒಂದು ಶೈಲಿ ಯಾ ಕಾರ್ಯಾಚರಣೆಯಿಂದ ಇನ್ನೊಂದಕ್ಕೆ ಪರಿವರ್ತಿಸಲು ಬಳಸುವ, ಕಂಪ್ಯೂಟರಿನ ಕೀಲಿಕೈ.
See also 1toggle
2toggle ಟಾಗ(ಗ್‍)ಲ್‍
ಸಕರ್ಮಕ ಕ್ರಿಯಾಪದ
  1. ಕಣ್ಣಿಯ ಬೆಣೆ ಯಾ ಗೂಟ ಅಳವಡಿಸು.
  2. ಅಡ್ಡಬೆಣೆ, ಕಡ್ಡಿ, ಮೊದಲಾದವುಗಳಿಂದ ಭದ್ರಪಡಿಸು, ಬಂಧಿಸು.
  3. (ಕಂಪ್ಯೂಟರ್‍) ಒಂದು ಶೈಲಿ ಯಾ ಪ್ರೋಗ್ರಾಂನಿಂದ ಇನ್ನೊಂದಕ್ಕೆ ತಿರುಗಿಸಲು ಕಂಪ್ಯೂಟರಿನ ಕೀಲಿಕೈಯನ್ನು ಯಾ ಕೀಲಿಕೈಗಳನ್ನು ಒತ್ತು.