See also 2toddle
1toddle ಟಾಡ(ಡ್‍)ಲ್‍
ಸಕರ್ಮಕ ಕ್ರಿಯಾಪದ

ದಟ್ಟಗಾಲಿಡುತ್ತಾ (ದೂರವನ್ನು) ಶ್ರಮದಿಂದ ನಡೆದು ಸಮೆಯಿಸು, ಕ್ರಮಿಸು.

ಅಕರ್ಮಕ ಕ್ರಿಯಾಪದ
  1. (ನಡಗೆ ಕಲಿಯುತ್ತಿರುವ ಮಗುವಿನಂತೆ) ತತ್ತರಿಸಿಕೊಂಡು ಸಣ್ಣಸಣ್ಣ ಹೆಜ್ಜೆಯಿಂದ ನಡೆ; ದಟ್ಟಡಿಯಿಡು; ದಟ್ಟಗಾಲಿಡು; ತಪ್ಪು ಹೆಜ್ಜೆಯಿಡುತ್ತ ನಡೆ, ಹೋಗು.
  2. (ಆಡುಮಾತು) ಅಡ್ಡಾಡಿಕೊಂಡು ಬಾ; ಕಾಲಾಡಿಸಿಕೊಂಡು ಬಾ: toddle round ಸುತ್ತ ತಿರುಗಾಡಿಕೊಂಡು ಬಾ.
  3. (ಆಡುಮಾತು) ನಿರ್ಗಮಿಸು; ಹೊರಡು.
See also 1toddle
2toddle ಟಾಡ(ಡ್‍)ಲ್‍
ನಾಮವಾಚಕ
  1. ದಟ್ಟಡಿ; ದಟ್ಟ ನಡಗೆ; ತಪ್ಪು ಹೆಜ್ಜೆಯ ನಡಗೆ.
  2. ಅಲ್ಪದೂರದ ನಡಿಗೆ.