See also 2title
1title ಟೈ(ಟ್‍)ಲ್‍
ನಾಮವಾಚಕ
  1. (ಪುಸ್ತಕ, ಕಲಾಕೃತಿ, ಸಂಗೀತಕೃತಿ, ಮೊದಲಾದವುಗಳ) ಶೀರ್ಷಿಕೆ; ಹೆಸರು; ನಾಮಧೇಯ.
  2. (ಪುಸ್ತಕದ ಅಧ್ಯಾಯ, ಕವನ, ದಾಖಲೆ, ಮೊದಲಾದವುಗಳ ಮೇಲುಗಡೆ ಹಾಕಿದ) ಶಿರೋನಾಮೆ; ಶಿರೋಲೇಖ; ಶೀರ್ಷಿಕೆ; ತಲೆಬರಹ.
  3. (ಪುಸ್ತಕದ) ಮುಖಪುಟದ, ಹೆಸರುಹಾಳೆಯಲ್ಲಿನ ವಿಷಯಗಳು, ವಿವರಗಳು, ಉದಾಹರಣೆಗೆ Shakespeare’s plays ಷೇಕ್ಸ್‍ಪಿಯರನ ನಾಟಕಗಳು.
  4. ಶೀರ್ಷಿಕೆ; ಶಿರೋನಾಮೆಯ, ಹೆಸರಿನ–ಪುಸ್ತಕ, ಗ್ರಂಥ, ಪ್ರಕಟಣೆ: published 20 new titles ಇಪ್ಪತ್ತು ಹೊಸ ಪುಸ್ತಕಗಳನ್ನು, ಶೀರ್ಷಿಕೆಗಳನ್ನು ಪ್ರಕಟಿಸಿದ.
  5. ವಿಶಿಷ್ಟನಾಮ:
    1. ಅಧಿಕಾರಸೂಚಕ–ನಾಮ, ಪ್ರಶಸ್ತಿ, ಬಿರುದು: King ರಾಜ. Queen ರಾಣಿ. Professor ಪ್ರಾಧ್ಯಾಪಕ.
    2. ಶ್ರೀಮಂತಿಕೆಯ ಸೂಚಕವಾದ ನಾಮ: Duke, Lord ಡ್ಯೂಕ್‍, ಲಾರ್ಡ್‍.
    3. ಪ್ರಶಸ್ತಿಸೂಚಕ: Knight ನೈಟ್‍ಹುಡ್‍ ಪ್ರಶಸ್ತಿ.
    4. ಪದವಿಸೂಚಕ, ವಿದ್ಯಾರ್ಹತೆ ಸೂಚಕ–ನಾಮ: M.A. ಎಂ.ಎ., ಮಾಸ್ಟರ್‍ ಆಹ್‍ ಆರ್ಟ್‍ ಪದವೀಧರ.
    5. (ಸಂಬೋಧನೆಯಲ್ಲಿ: ಹೆಸರಿನ ಹಿಂದೆ ಸೇರಿಸುವ) ಉಪಾಧಿ: Lord, Sir, His Majesty ಲಾರ್ಡ್‍, ಸರ್‍, ಮಹಾಪ್ರಭು.
  6. (ನ್ಯಾಯಶಾಸ್ತ್ರ) (ಆಸ್ತಿ ಮೊದಲಾದವುಗಳಿಗೆ)
    1. ಹಕ್ಕು; ಹಕ್ಕುದಾರಿ; ಅಧಿಕಾರ.
    2. ಹಕ್ಕು ಸ್ಥಾಪಿಸುವ ವಿಷಯಗಳು, ವಾಸ್ತವಾಂಶಗಳು.
    3. (ಆಸ್ತಿ ಮೊದಲಾದವುಗಳಿಗೆ ಸಂಬಂಧಿಸಿದ) ಹಕ್ಕುಪತ್ರ, ನ್ಯಾಯವಾದ ಯಾ ಒಪ್ಪಿಗೆ ಪಡೆದ ಹಕ್ಕು.
  7. (ಕ್ರೈಸ್ತಧರ್ಮ)
    1. (ದೀಕ್ಷೆ ಕೊಡಲು ಒಂದು ನಿಬಂಧನೆಯಾಗಿ ನಿರ್ದೇಶಿಸಿದ) ನಿಗದಿತವಾದ ಕಾರ್ಯವಲಯ ಹಾಗೂ ಆದಾಯ ಮೂಲ.
    2. ರೋಮ್‍ನಲ್ಲಿ ಕಾರ್ಡಿನಲ್‍ನ ಅಧೀನದಲ್ಲಿರುವ ಜಿಲ್ಲಾ ಚರ್ಚು.
  8. (ಚಲನಚಿತ್ರ, ಆಕಾಶವಾಣಿ, ಮೊದಲಾದವುಗಳಲ್ಲಿ)
    1. ಸಹಾಯ ಮಾಡಿದವರ ಹೆಸರು; ಸಹಾಯ ಸ್ಮರಣೆ; ಸಹಾಯಕರ ಉಲ್ಲೇಖ.
    2. ವಿವರಣೆ–ಲೇಖ, ಬರೆಹ, ಪಟ್ಟಿ.
  9. (ಆಟಗಳಲ್ಲಿ) ಅಗ್ರಸ್ಥಾನ; ಅಗ್ರಪಟ್ಟ.
See also 1title
2title ಟೈ(ಟ್‍)ಲ್‍
ಸಕರ್ಮಕ ಕ್ರಿಯಾಪದ
  1. ಹೆಸರಿಡು; ಹೆಸರು ಕೊಡು; ಶಿರೋನಾಮೆ ಒದಗಿಸು.
  2. ಪ್ರಶಸ್ತಿ, ಬಿರುದು, ಮೊದಲಾದವುಗಳನ್ನು ನೀಡು.