See also 2tire  3tire  4tire  5tire
1tire ಟೈಅರ್‍
ಸಕರ್ಮಕ ಕ್ರಿಯಾಪದ
  1. ಬಳಲಿಸು; ದಣಿಸು; ಸುಸ್ತುಮಾಡು; ಆಯಾಸಗೊಳಿಸು.
  2. ಬೇಸರ ಪಡಿಸು; ತಾಳ್ಮೆಗೆಡಿಸು; ಆಸಕ್ತಿಇಲ್ಲದಂತೆ ಮಾಡು; ತಲೆ ಚಿಟ್ಟುಹಿಡಿಸು.
ಅಕರ್ಮಕ ಕ್ರಿಯಾಪದ

ಬಳಲು; ದಣಿ; ಸುಸ್ತಾಗು; ಆಯಾಸಗೊಳ್ಳು.

See also 1tire  3tire  4tire  5tire
2tire ಟೈಅರ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) (ವಾಹನ ಚಕ್ರದ ಹೊರಸುತ್ತಿನಲ್ಲಿ ಬಲಪಡಿಸಲು ಯಾ ಬಿಗಿಗಾಗಿ ಹಾಕಿದ, ರಬ್ಬರಿನ) ಪಟ್ಟೆ; ಪಟ್ಟಿ; ‘ಟೈರು’.

See also 1tire  2tire  4tire  5tire
3tire ಟೈಅರ್‍
ಸಕರ್ಮಕ ಕ್ರಿಯಾಪದ

(ವಾಹನ ಚಕ್ರಕ್ಕೆ) ಟೈರು ಹಾಕು, ಅಳವಡಿಸು.

See also 1tire  2tire  3tire  5tire
4tire ಟೈಅರ್‍
ನಾಮವಾಚಕ

(ಪ್ರಾಚೀನ ಪ್ರಯೋಗ)

  1. ತಲೆಯುಡಿಗೆ; ಉಷ್ಣೀಷ.
  2. ಉಡುಪು; ಉಡಿಗೆ.
See also 1tire  2tire  3tire  4tire
5tire ಟೈಅರ್‍
ಸಕರ್ಮಕ ಕ್ರಿಯಾಪದ

(ಪ್ರಾಚೀನ ಪ್ರಯೋಗ) (ತಲೆ, ಕೂದಲು, ಮೊದಲಾದವುಗಳಿಗೆ) ಅಲಂಕಾರ ಮಾಡು; ಪ್ರಸಾಧನ ಮಾಡು; ಸಿಂಗರಿಸು; ಶೃಂಗಾರ ಮಾಡು.