See also 2tincture
1tincture ಟಿಂಕ್‍ಟ್ಯರ್‍, ಟಿಂಕ್ಚರ್‍
ನಾಮವಾಚಕ
  1. ಟಿಂಚರು; ಒಂದು ವಸ್ತುವಿನ (ಸಾಮಾನ್ಯವಾಗಿ ಸಸ್ಯ ಪದಾರ್ಥದ) ಸಾರವನ್ನು ಮದ್ಯಸಾರದಲ್ಲಿ ಲೀನ ಮಾಡಿ ಔಷಧವಾಗಿ ಬಳಸುವ ದ್ರಾವಣ: tincture of quinine ಸಿಂಕೋನದ ಮದ್ಯಾರ್ಕ ಟಿಂಚರು.
  2. ನಸು–ರುಚಿ, ವಾಸನೆ, ಗಂಧ, ಛಾಯೆ (ರೂಪಕವಾಗಿ ಸಹ).
  3. ವರ್ಣದ ಛಾಯೆ.
  4. (ವಂಶಲಾಂಛನ ವಿದ್ಯೆ) ಗುರಾಣಿಯ ಮೇಲೆ ಗುರುತಿಗೆ ಬಳಸುವ ಲೋಹಗಳು, ಬಣ್ಣಗಳು, ತುಪ್ಪುಳ ಚರ್ಮ, ಮೊದಲಾದವು.
  5. (ಆಡುಮಾತು) ಆಲ್ಕಹಾಲ್‍ ಇರುವ ಮದ್ಯ.
See also 1tincture
2tincture ಟಿಂಕ್‍ಟ್ಯರ್‍, ಟಿಂಕ್ಚರ್‍
ಸಕರ್ಮಕ ಕ್ರಿಯಾಪದ
  1. ನಸುಬಣ್ಣ ಕೊಡು; ಗಂಧದೋರು; ರುಚಿಕೊಡು.
  2. (ಗುಣ ಮೊದಲಾದವುಗಳ) ನಸುಛಾಯೆ ಕೊಡು; ಬಣ್ಣ ಕೊಡು.