See also 2time
1time ಟೈಮ್‍
ನಾಮವಾಚಕ
    1. ಕಾಲ: time will show who is right ಯಾರು ಸರಿ ಎಂಬಉದನ್ನು ಕಾಲವೇ ನಿರ್ಧರಿಸುತ್ತದೆ. it will stand for all time ಅದು ಎಂದೆಂದಿಗೂ (ಯಾ ಶಾಶ್ವತವಾಗಿ, ಸಾರ್ವಕಾಲಿಕವಾಗಿ) ಇರುತ್ತದೆ.
    2. (Time) (ಕೈಯಲ್ಲಿ ಕುಡುಗೋಲು, ಮರಳು ಗಡಿಯಾರ ಹಿಡಿದಿರುವಂತೆ ಚಿತ್ರಿಸಲಾದ) ಕಾಲಪುರುಷ.
  1. (ವಿಶಿಷ್ಟ ಘಟನಾವಳಿ, ಸನ್ನಿವೇಶಗಳು, ಮೊದಲಾದವಕ್ಕೆ ಸಂಬಂಧಿಸಿದ) ಕಾಲಾವಧಿ; ಯುಗ: the times of the Mughals ಮೊಗಲ್‍ ದೊರೆಗಳ ಕಾಲ.
  2. ಹೊತ್ತು; ಸಮಯ; ವೇಳೆ; ಬಿಡುವು; ಪುರುಸೊತ್ತು: had no time to discuss it ಅದನ್ನು ಚರ್ಚಿಸಲು ಸಮಯವಿರಲಿಲ್ಲ.
  3. (ವ್ಯಕ್ತಿಯ) ಜೀವಾವಧಿ; ಜೀವಿತ ಕಾಲ; ಜೀವಮಾನ: will last my time ಅದು ನನ್ನ ಜೀವಮಾನದ ತನಕ ಬಾಳುತ್ತದೆ, ನನ್ನ ಜೀವಾವಧಿಗೆ ಸಾಕಾಗುತ್ತದೆ.
  4. (ಆಡುಮಾತು) ಜೈಲುಶಿಕ್ಷೆ; ಸೆರೆಮನೆವಾಸ(ದ ಶಿಕ್ಷೆ): he is doing time ಅವನು ಜೈಲುಶಿಕ್ಷೆ ಅನುಭವಿಸುತ್ತಿದ್ದಾನೆ.
  5. ಕಲಿಕೆಕಾಲ; ಅಭ್ಯಾಸಾವಧಿ; ಕೆಲಸ ಮೊದಲಾದವನ್ನು ಕಲಿಯುವ ಕಾಲ, ಅವಧಿ: he served his time in the army ಅವನು ಸೈನ್ಯದಲ್ಲಿ ಕಲಿಕೆಯ ಕಾಲ ಕಳೆದ.
    1. ಮುಷ್ಟಿಕಾಳಗದ ಸುತ್ತಿನ ನಿಗದಿತ–ಅವಧಿ, ಸಮಯ: the referee cried: ‘the time is up’ ‘ ವೇಳೆ ಆಯಿತು’ ಎಂದು ತೀರ್ಪುಗಾರ ಒದರಿದ.
    2. ಪಾನಗೃಹದ ಮುಚ್ಚುವ ವೇಳೆ: ‘the time is up’ cried the landlord ಪಾನಗೃಹದ ಯಮಾನ (ಕುಡಿತದ) ‘ವೇಳೆ ಮುಗಿಯಿತು’ ಎಂದ.
  6. (ಒಂದು ಉದ್ದೇಶ ಮೊದಲಾದವುಗಳಿಗೆ ಒದಗಿಸಿದ) ನಿಗದಿತ ವೇಳೆ; ನಿಶ್ಚಿತ ಕಾಲ: there is a time for everything ಎಲ್ಲದಕ್ಕೂ ಒಂದು ನಿಯಮಿತ ಕಾಲವಿದೆ. now is the time ಇದೀಗ ಸಕಾ(ವಾಗಿದೆ).
  7. ಗರ್ಭಾವಧಿ; ಗರ್ಭ ಧರಿಸಿರುವ ಕಾಲ: is far on in her time ಅವಳಿಗೆ (ಹೆರಿಗೆಯ) ದಿನ ತುಂಬಉತ್ತಿದೆ.
  8. ಹೆರಿಗೆಯ ದಿನ, ತಾರೀಖು: is near her time ಅವಳಿಗೆ ದಿನ ತುಂಬಿದೆ; ಹೆರಿಗೆಯ ದಿನ ಬಂದಿತು.
  9. ಮರ–ಕಾಲ, ದಿನ: my time is drawing near ನನ್ನ ಮರಣಕಾಲ ಸಮೀಪಿಸುತ್ತಾ ಬಂದಿದೆ.
  10. (ಏಕವಚನ ಯಾ ಬಹುವಚನದಲ್ಲಿ) ಜೀವನದ ಯಾ ಒಂದುಕಾಲದ ಜೀವನದ ಸ್ಥಿತಿ (ಮುಖ್ಯವಾಗಿ) ಆರ್ಥಿಕ ಸ್ಥಿತಿಗತಿ: bad times ದುರ್ಭಿಕ್ಷದ ಕಾಲ; ಕೆಟ್ಟ ಕಾಲ. hard times ಮುಗ್ಗಟ್ಟಿನ, ಕಷ್ಟದ ಕಾಲ.
  11. (ಬಹುವಚನದಲ್ಲಿ)(ಏನನ್ನಾದರೂ ಅನೇಕ ಪಟ್ಟು ಹೆಚ್ಚಿಸಿ ಹೇಳುವಾಗ, ಗುಣಾಕಾರದಲ್ಲಿ) ಸರತಿ; ಬಾರಿ; ಪಟ್ಟು; ಸಲ: three times three is nine ಮೂರುಮೂರಲ ಒಂಬತ್ತು. ten times easier ಹತ್ತು ಪಟ್ಟು ಸುಭತರ.
  12. (ಮಾಮೂಲಿನಂತೆ ಎಣಿಸಿದ ಕಾಮಾನ ಸೂಚಿಸುವಲ್ಲಿ) ಕಾಲಾವಧಿ; ಸಮಯ; ಕಾಲ; ಹೊತ್ತು: the time allowed was four months ಸಾಮಾನ್ಯವಾಗಿ ಅದಕ್ಕೆ ಕೊಡಲಾಗುತ್ತಿದ್ದ ಕಾಲಾವಧಿ ನಾಲ್ಕು ತಿಂಗಳು. did a mile in record time (ದಾಖಲೆಯಿರುವುದರಲ್ಲೆಲ್ಲಾ) ಅತ್ಯಂತ ಕಡಮೆ ಸಮಯದಲ್ಲಿ ಒಂದು ಮೈಲಿ ಓಡಿದ.
  13. ಕರಾರುವಾಕ್ಕಾಗಿ ಸೂಚಿಸಿದ ಕಾಲ, ಹೊತ್ತು: the time fixed was 4–30 ನಿಗದಿಯಾಗಿದ್ದ ಕಾಲ 4-30 ಗಂಟೆ.
  14. (ಕೆಲಸ ಮೊದಲಾದವುಗಳನ್ನು ಮಾಡಲು) ತೆಗೆದುಕೊಂಡ ಕಾಲ; ಹಿಡಿದ ಸಮಯ.
  15. (ಸಂಗೀತ)
    1. (ದ್ರುತ, ವಿಳಂಬ, ಮೊದಲಾದ) ಸ್ವರ ನುಡಿಯುವ ಕಾಲ.
    2. ತಾಳ; ಲಯ; ಗತಿ: in waltz time ವಾಲ್ಟ್ಸ್‍ ನೃತ್ಯದ ಗತಿಯಲ್ಲಿ.
  16. ಅನಿಗದಿತ, ಅನಿರ್ದಿಷ್ಟ–ಕಾಲ: waited for a time ಸ್ವಲ್ಪ ಹೊತ್ತು ಕಾದೆ.
  17. ಸಂದರ್ಭ; ಪರಿಸ್ಥಿತಿ: the last time I saw you ನಾನು ನಿನ್ನನ್ನು ಕಂಡ ಕೊನೆಯ, ಕಡೆಯ ಸಂದರ್ಭದಲ್ಲಿ.
  18. ಸದ್ಯದ ಕಾಲ; ಪ್ರಕೃತ ಕಾಲ; ವರ್ತಮಾನ ಯುಗ.
  19. (ವ್ಯಕ್ತಿಗಳ ಯಾ ವಸ್ತುಗಳ ಮೇಲೆ ಪರಿಣಾಮ ಬೀರುವುದಾಗಿ ಭಾವಿಸಿದ) ಕಾಲದ ಗತಿ, ಪ್ರಗತಿ, ಪ್ರವಾಹ: stood the test of time ಕಾಲಗತಿಯ ಪರೀಕ್ಷೆಯಲ್ಲಿ ತೇರ್ಗಡೆಯಾದ.
  20. ಗಂಟೆ; ಹೊತ್ತು: what is the time? ಈಗ ಗಂಟೆ ಎಷ್ಟು?
ಪದಗುಚ್ಛ
  1. against time (ಅವಧಿಯೊಳಗೆ ಮುಗಿಯಬೇಕೆಂದು) ಅತ್ಯಂತ ವೇಗದಿಂದ, ಭರದಿಂದ: working against time ( ಅವಧಿಯೊಳಗೆ ಮುಗಿಸಬೇಕೆಂದು) ಭರದಿಂದ ಕೆಲಸ ಮಾಡುತ್ತ.
  2. ahead of one’s time ತನ್ನ ಕಾಲಕ್ಕಿಂತ ಬಹಳ ಮುಂದೆ, ಬಹಳಷ್ಟು ಮುಂದುವರಿದ.
  3. ahead of time ಹೇಳಿದ್ದಕ್ಕಿಂತ ಯಾ ನಿರೀಕ್ಷಿಸಿದ್ದಕ್ಕಿಂತ ಮುಂಚಿತವಾಗಿ.
  4. all the time
    1. ಉದ್ದಕ್ಕೂ; ಮೊದಲಿನಿಂದ ಕೊನೆಯವರೆಗೂ: they were laughing all the time ಅವರು ಉದ್ದಕ್ಕೂ ನಗುತ್ತಿದ್ದರು.
    2. ಒಂದೇ ಸಮನೆ; ನಿರಂತರವಾಗಿ; ಎಡೆಬಿಡದೆ : nags all the time ಒಂದೇ ಸಮನೆ ಕಾಡುತ್ತಾನೆ; ಎಡೆಬಿಡದೆ ಕಿರಿಕಿರಿ ಉಂಟುಮಾಡುತ್ತಾನೆ.
    3. ಯಾವಾಗಲೂ; ಸದಾ(ಕಾಲ); ಸರ್ವದಾ; ಎಲ್ಲಾ ಕಾಲದಲ್ಲೂ: leaves a light all the time ಸದಾ ದೀಪ ಉರಿಸುತ್ತಾನೆ, ಹೊತ್ತಿಸಿರುತ್ತಾನೆ.
  5. at a time ಒಂದು ಸಲಕ್ಕೆ; ಒಂದು ಸರ್ತಿಗೆ.
  6. at different times of the year ವರ್ಷದ ನಾನಾ ಕಾಲಗಳಲ್ಲಿ (ಋತು, ಮಾಸ, ಮೊದಲಾದವು ಎಂಬರ್ಥದಲ್ಲಿ).
  7. at one time
    1. ಒಮ್ಮೆ; ಹಿಂದೊಮ್ಮೆ; ಒಂದಾನೊಂದು ಕಾಲದಲ್ಲಿ: at one time we met frequently ಹಿಂದೊಮ್ಮೆ ನಾವು ಮತ್ತೆ ಮತ್ತೆ ಸೇರುತ್ತಿದ್ದೆವು.
    2. ಏಕಕಾಲದಲ್ಲಿ: he ran three businesses at one time ಅವನು ಏಕಕಾಲದಲ್ಲಿ ಮೂರು ವಾಣಿಜ್ಯ ಸಂಸ್ಥೆಗಳನ್ನು ನಡೆಸುತ್ತಿದ್ದ.
  8. at the same time
    1. ಅದೇ ಕಾಲಕ್ಕೆ.
    2. ಆದರೂ; ಆದಾಗ್ಯೂ; ಏನೇ ಆದರೂ.
  9. at this time of day (ರೂಪಕವಾಗಿ) (ಚರಿತ್ರೆ, ಒಪ್ಪಂದದ ಮಾತುಕತೆ, ಮೊದಲಾದವುಗಳ ವಿಷಯದಲ್ಲಿ) ಇಷ್ಟು ತಡವಾಗಿ; ಇಷ್ಟು ಮೀರಿದ ಘಟ್ಟದಲ್ಲಿ.
  10. at times ಆಗಾಗ; ಆಗೊಮ್ಮೆ ಈಗೊಮ್ಮೆ.
  11. before one’s time ಕಾಲಕ್ಕೆ ಮೊದಲೇ; ಪಕ್ವವಾಗುವುದಕ್ಕೆ ಮುಂಚೆಯೇ.
  12. before time ನಿರೀಕ್ಷಿತ ಯಾ ಉಚಿತ ಕಾಲಕ್ಕೆ ಮುಂಚೆಯೇ, ಮೊದಲೇ.
  13. between times ಆಗಾಗ; ಒಮ್ಮೊಮ್ಮೆ; ಆಗಿಂದ ಆಗ.
  14. Father Time = 1time(1b).
  15. for the time (being) ಸದ್ಯಕ್ಕೆ; ಬೇರೆ ವ್ಯವಸ್ಥೆ ಮಾಡುವವರೆಗೆ.
  16. from time to time ಆಗಿಂದಾಗ್ಗೆ; ಆಗೊಮ್ಮೆ ಈಗೊಮ್ಮೆ.
  17. good old times (ಕಳೆದುಹೋದ) ಒಳ್ಳೆಯ ಕಾಲ; (ಹಿಂದಿನ) ಸುಖಸಮೃದ್ಧಿಯ ಕಾಲ.
  18. half the time (ಆಡುಮಾತು) ಅರ್ಧದಷ್ಟು ಕಾಲ, ಸಲ.
  19. have a good time ಖುಷಿಯಾಗಿ ಕಾಲ ಕಳೆ; ಮಜಾ ಮಾಡು.
  20. have a time of it ಕಷ್ಟಕಾಲ ಅನುಭವಿಸು; ತೊಂದರೆ ಅನುಭವಿಸು.
  21. have no time for (ಒಂದನ್ನು ಮಾಡಲು)
    1. ಕಾಲವಿಲ್ಲದಿರು; ಪುರುಸೊತ್ತು ಇಲ್ಲದಿರು.
    2. ಇಷ್ಟವಿಲ್ಲದಿರು.
  22. have the time
    1. (ಯಾವುದನ್ನಾದರೂ ಮಾಡಲು) ಇಷ್ಟವಿರು; ಒಲವಿರು.
    2. (ಮಾಡುವಷ್ಟು) ಪುರುಸೊತ್ತು ಇರು, ಸಮಯವಿರು.
    3. (ಗಡಿಯಾರ ನೋಡಿ) ಸಮಯವೆಷ್ಟೆಂದು ತಿಳಿ; ‘ಈಗ ಎಷ್ಟು ಸಮಯ?’ ಎಂದು ತಿಳಿದುಕೊ.
  23. in no (or less than no) time ಒಂದು ಕ್ಷಣದಲ್ಲಿ; ಬಹಳ ಬೇಗ.
  24. in (one’s) own good time ತನಗೆ ತೋರಿದಾಗ; ತನಗೆ ಮನಸ್ಸು ಖುಷಿ ಬಂದಾಗ.
  25. in one’s own time (ಕೆಲಸದ ವೇಳೆಯನ್ನುಳಿದ) ಒಬ್ಬನ ವಿರಾಮ ಕಾಲದಲ್ಲಿ; ಒಬ್ಬನ ಬಿಡುವಿನಲ್ಲಿ.
  26. in one’s time (ಜೀವನದ ಗತಕಾಲಕ್ಕೆ ಸಂಬಂಧಿಸಿದಂತೆ) ಒಬ್ಬನ ಕಾಲದಲ್ಲಿ; ಅಂದಿನ ಕಾಲದಲ್ಲಿ; ಆ ಕಾಲದಲ್ಲಿ: in his time he was the world’s greatest composer ಅವನ ಕಾಲದಲ್ಲಿ ಅವನು ಜಗತ್ತಿನ ಸರ್ವಶ್ರೇಷ್ಠ ರಚನಕಾರನಾಗಿದ್ದ.
  27. in time
    1. ಸಕಾಲಕ್ಕೆ; ಹೊತ್ತಿಗೆ, ಸಮಯಕ್ಕೆ ಸರಿಯಾಗಿ; ತಡ ಮಾಡದೆ.
    2. ಕೊನೆಗೆ; ಪರಿಣಾಮದಲ್ಲಿ.
    3. ಕಾಲಕ್ರಮೇಣ; ಕಾಲಕ್ರಮದಲ್ಲಿ; ಇಂದಲ್ಲ, ನಾಳೆ.
    4. (ಮುಖ್ಯವಾಗಿ ಸಂಗೀತದ ವಿಷಯದಲ್ಲಿ) ತಾಳಕ್ಕೆ ಸರಿಯಾಗಿ.
  28. keep good (or bad) time
    1. (ಗಡಿಯಾರ) ಕರಾರುವಾಕ್ಕಾಗಿ (ಯಾ ತಪ್ಪಾಗಿ) ಗಂಟೆ, ಸಮಯ ತೋರಿಸು.
    2. ಸಮಯಪಾಲನೆ ಮಾಡು (ಯಾ ಮಾಡದಿರು); ಹೊತ್ತಿಗೆ ಸರಿಯಾಗಿ ಇರು (ಯಾ ಇರದಿರು).
  29. keep time ತಾಳಕ್ಕೆ ಸರಿಯಾಗಿ ಹಾಡು ಯಾ ತಾಳಕ್ಕನುಗುಣವಾಗಿ ಹೆಜ್ಜೆಹಾಕು, ನೃತ್ಯ ಮಾಡು.
  30. know the time of day ವಿಷಯ ಮೊದಲಾದವನ್ನು ಚೆನ್ನಾಗಿ ತಿಳಿದಿರು; ಲೋಕವ್ಯವಹಾರ ಗೊತ್ತಿರು, ಚೆನ್ನಾಗಿ ಅರಿತಿರು.
  31. lose no time (ಏನನ್ನೋ ಮಾಡುತ್ತ) ಕಾಲವ್ಯಯ ಮಾಡದಿರು; ಕಾಲ ಹಾಳುಮಾಡದಿರು; ತಕ್ಷಣ ಕಾರ್ಯಪ್ರವೃತ್ತನಾಗು; ಕೂಡಲೇ ಕ್ರಮ ತೆಗೆದುಕೊ.
  32. not before time ತುಂಬ ಮುಂಚಿತವಾಗಿರದೆ; ಸಕಾಲಕ್ಕೆ; ಕಾಲಕ್ಕೆ ಸರಿಯಾಗಿ.
  33. no time (ಆಡುಮಾತು) ಕ್ಷಣಾರ್ಧದಲ್ಲಿ; ಬಹಳ ಬೇಗ; ಕೂಡಲೇ: it was no time before she was back ಅವಳು ಕ್ಷಣಾರ್ಧದಲ್ಲಿ ಹಿಂತಿರುಗಿದಳು.
  34. on time
    1. ಸಮಯಕ್ಕೆ ಸರಿಯಾಗಿ.
    2. (ಅಮೆರಿಕನ್‍ ಪ್ರಯೋಗ) ಕಂತು ಕೊಳ್ಳಿಕೆಯಲ್ಲಿ; ಕಂತು ವ್ಯಾಪಾರದ ರೀತಿಯಲ್ಲಿ.
  35. out of time
    1. ಅಕಾಲದ; ಅಕಾಲಿಕವಾಗಿ; ಹೊತ್ತಲ್ಲದ ಹೊತ್ತಿನಲ್ಲಿ; ತೀರಾ ತಡವಾಗಿ, ಸಮಯ ಮೀರಿ.
    2. (ಸಂಗೀತ ಮೊದಲಾದವುಗಳ ವಿಷಯದಲ್ಲಿ) ತಾಳ ತಪ್ಪಿ.
  36. pass the time of day (ಆಡುಮಾತು) ಕುಶಲಪ್ರಶ್ನೆ ಮಾಡು; (ಲೋಕಾಭಿರಾಮವಾಗಿ) ಯೋಗಕ್ಷೇಮ ವಿಚಾರಿಸು: the women would stop in the market to pass the time of day ಆ ಹೆಂಗಸರು ಲೋಕಾಭಿರಾಮವಾಗಿ ಮಾತನಾಡಲು ಮಾರ್ಕೆಟ್‍ ಬಳಿ ನಿಲ್ಲುತ್ತಿದ್ದರು.
  37. play for time (ಇನ್ನಷ್ಟು ಕಾಲಾವಕಾಶ ಸಿಕ್ಕಲೆಂದು) ಏನಾದರೂ ನೆಪ ಹೂಡು; ನೆಪ ಹೇಳಿ ಕಾಲಹರಣ ಮಾಡು; ನೆಪ ಹೂಡಿ ಕಾಲ ತಳ್ಳು.
  38. so that’s the time of day! (ಆಡುಮಾತು) ಪರಿಸ್ಥಿತಿ, ಹಾಗೋ!; ಹಾಗೋ ಸಮಾಚಾರ!; ಅದೋ ನಿನ್ನ ಆಟ (ಕುತಂತ್ರ)!
  39. spend time ಕಾಲ ಕಳೆ.
  40. the time of day (ಗಡಿಯಾರ ತೋರಿಸುವ) ಗಂಟೆ, ಹೊತ್ತು.
  41. the time of one’s life ಸುಖ ಸಂತೋಷದ ಕಾಲ; ಶುಕ್ರದೆಶೆ: they had the time of their life on their way to England ಇಂಗ್ಲೆಂಡಿಗೆ ಹೋಗುವ ದಾರಿಯಲ್ಲಿ ಅವರು ಸುಖಸಂತೋಷದಿಂದ ಕಾಲ ಕಳೆದರು.
  42. The Times (ಲಂಡನ್ನಿನ) ‘ದಿ ಟೈಮ್ಸ್‍’ ಪತ್ರಿಕೆ.
  43. the times
    1. ಈಗಿನ ಕಾಲ; ಇಂದಿನ ಕಾಲ.
    2. ಆ ಕಾಲ; ಅಂದು.
  44. the times have changed ಕಾಲ, ಪರಿಸ್ಥಿತಿಗಳು ಬದಲಾಯಿಸಿವೆ.
  45. time and a half ಒಂದೂವರೆಪಟ್ಟು ವೇತನ (ನಿಗದಿಯಾದ ಕಾಲಕ್ಕಿಂತ) ಹೆಚ್ಚುಕಾಲ ಕೆಲಸ ಮಾಡಿದುದಕ್ಕೆ, ಕ್ರಮವಾದ ಸಂಬಳಕ್ಕಿಂತ ಯಾ ಕೂಲಿಗಿಂತ $1\frac { 1}{ 2}$ ಪಟ್ಟು ಹೆಚ್ಚಾಗಿ ಕೊಡುವ ಅಧಿಕಾವಧಿ ವೇತನ ದರ.
  46. Time and tide wait for no man ಕಾಲದ ಪ್ರವಾಹ ಯಾರಿಗೂ ಕಾಯುವುದಿಲ್ಲ.
  47. time-book (or time-card or time-clock) ಆಯಾ ಕೆಲಸಗಾರರು ಕೆಲಸ ಮಾಡಿದ ವೇಳೆಯನ್ನು ದಾಖಲಿಸುವ ಪುಸ್ತಕ (ಯಾ ಕಾರ್ಡು ಯಾ ಗಡಿಯಾರ).
  48. time off (or out)
    1. (ಕೆಲಸದ ನಡುವೆ) ವಿಶ್ರಾಂತಿಗಾಗಿ ತೆಗೆದುಕೊಂಡ ಕಾಲ; ವಿರಾಮ; ಬಿಡುವು.
    2. (ಕೆಲಸದ ನಡುವೆ) ಬೇರೆ ಏನೋ ಮಾಡಲು ಕಳೆದ ಹೊತ್ತು.
    3. (ಅಮೆರಿಕನ್‍ ಪ್ರಯೋಗ) ಆಟದ ನಡುವೆ ಸ್ವಲ್ಪ ವಿರಾಮ.
  49. time immemorial (or out of mind) ಅನಾದಿ–ಕಾಲದವರೆಗೆ ಯಾ ಕಾಲದಿಂದ; (ನೆನಪಿಲ್ಲದಷ್ಟು) ಬಹು ಪ್ರಾಚೀನ ಕಾಲದವರೆಗೆ ಯಾ ಕಾಲದಿಂದ.
  50. times out of number ಲೆಕ್ಕವಿಲ್ಲದಷ್ಟು ಸಲ.
  51. time after time
    1. ಪದೇಪದೇ; ಅನೇಕ ಸಲ.
    2. ಅನೇಕ ಸಂದರ್ಭಗಳಲ್ಲಿ.
  52. time and (or time and time) again ಅನೇಕ ಸಂದರ್ಭಗಳಲ್ಲಿ.
  53. time was when I could do it ನಾನು ಅದನ್ನು ಮಾಡಬಹುದಾಗಿದ್ದ ಕಾಲವೊಂದಿತ್ತು.
  54. what time (ಕಾವ್ಯಪ್ರಯೋಗ, ಪ್ರಾಚೀನ ಪ್ರಯೋಗ) ಆಗ; ಅಂದು; ಆ ಸಮಯದಲ್ಲಿ.
See also 1time
2time ಟೈಮ್‍
ಸಕರ್ಮಕ ಕ್ರಿಯಾಪದ
  1. (ಯಾವುದನ್ನೇ ಮಾಡುವ) ಕಾಲ ಯಾ ಸಂದರ್ಭವನ್ನು–ಚುನಾಯಿಸು, ನಿಶ್ಚಯಿಸು, ನಿರ್ಧರಿಸು: time your remarks carefully ನಿನ್ನ ಟೀಕೆಗಳಿಗೆ ಸಮಯವನ್ನು ಜಾಗರೂಕತೆಯಿಂದ ನಿಶ್ಚಯಿಸು.
  2. ಕಾಲಕ್ಕೆ ಸರಿಯಾಗಿ ಮಾಡು; ಸಮಯಕ್ಕೆ ಸರಿಯಾಗಿ ಮಾಡು; ಸಮಯೋಚಿತವಾಗಿ ನಡೆಸು: time your blows ಸಮಯವರಿತು ಏಟು ಹಾಕು. the remark was ill timed ಆ ಮಾತು ಸಮಯೋಚಿತವಾಗಿರಲಿಲ್ಲ.
  3. (ಆಗಮನ ಮೊದಲಾದವುಗಳ) ಕಾಲ ಗೊತ್ತುಮಾಡು; ಕಾಲ ವ್ಯವಸ್ಥೆಗೊಳಿಸು.
  4. (ಪಂದ್ಯ, ಓಟಗಾರ, ಕಾರ್ಯರೀತಿ, ಮೊದಲಾದವುಗಳು ತೆಗೆದುಕೊಳ್ಳುವ) ಕಾ–ತಿಳಿದುಕೊ, ಗೊತ್ತುಮಾಡು, ಲೆಕ್ಕಹಾಕು.
  5. ಕಾಲದ ಅವಧಿ ಯಾ ಅಂತರವನ್ನು ನಿಯಂತ್ರಿಸು; ಕಾಲವ್ಯವಸ್ಥೆಗೊಳಿಸು: trains are timed to arrive every hour ಪ್ರತಿಯೊಂದು ಗಂಟೆಗೂ ರೈಲುಗಳು ಬರುವಂತೆ ಕಾಲವ್ಯವಸ್ಥೆ ಮಾಡಲಾಗಿದೆ.
ಅಕರ್ಮಕ ಕ್ರಿಯಾಪದ
  1. ತಾಳಕ್ಕೆ ಸರಿಯಾಗಿರು.
  2. ಸಮಯಕ್ಕೆ–ಸರಿಗೂಡು, ಸರಿಯಾಗು, ಹೊಂದಿಕೊ, ಸಂಗತವಾಗು; ಸಕಾಲಿಕವಾಗು.