See also 2tile
1tile ಟೈಲ್‍
ನಾಮವಾಚಕ
  1. ಹೆಂಚು.
  2. (ಜೇಡಿ, ಬೆಂಡು, ಲಿನೋಲಿಯಂ, ಮೊದಲಾದವುಗಳಿಂದ ಮಾಡಿದ ಆಯಾ ಚಾವಣಿ, ನೆಲ, ಗೋಡೆ, ಮೊದಲಾದವುಗಳಿಗೆ ಹೆಂಚಿನಂತೆ ಹದ್ದಿಸುವ) ಚದರ ಬಿಲ್ಲೆ; ಅಲಂಕಾರದ ಬಿಲ್ಲೆ; ಹಾಸು ಬಿಲ್ಲೆ.
  3. (ಆಟದಲ್ಲಿ ಬಳಸುವ) ತೆಳ್ಳನೆಯ ಬಿಲ್ಲೆ, ತಗಡು.
  4. (ಆಡುಮಾತು) (ಮುಖ್ಯವಾಗಿ ರೇಷ್ಮೆಯ) ಹ್ಯಾಟು; ಟೊಪ್ಪಿಗೆ.
ಪದಗುಚ್ಛ
  1. be on the tiles ಮಜಾ ಮಾಡು; ಕುಡಿತ, ವಿನೋದ, ಮೊದಲಾದವುಗಳಲ್ಲಿ ತೊಡಗಿರು.
  2. have a tile loose (ಅಶಿಷ್ಟ) ಸ್ವಲ್ಪ ತಲೆಕೆಟ್ಟಿರು; ಹುಚ್ಚು ಹಿಡಿದಿರು; ತಿಕ್ಕಲು ತಿರುಗಿರು.
See also 1tile
2tile ಟೈಲ್‍
ಸಕರ್ಮಕ ಕ್ರಿಯಾಪದ
  1. (ಚಾವಣಿ ಮೊದಲಾದವನ್ನು) ಹೆಂಚಿನಿಂದ ಮುಚ್ಚು; ಹೆಂಚು–ಹದ್ದಿಸು, ಹೊಚ್ಚು, ಹದಿ.
  2. (ಹ್ರೀಮೇಸನ್‍ ಎಂಬ ಸೌಭ್ರಾತೃ ಮಂಡಲಿ ಸಭೆಗೆ, ಮಂದಿರದೊಳಕ್ಕೆ ಹೊರಗಿನವರು ನುಗ್ಗದಂತೆ) ಬಾಗಿಲಿನಲ್ಲಿ–ಕಾವಲು ಹಾಕು, ಕಾವಲಿಡು.
ಪದಗುಚ್ಛ

tile in ಹೆಂಚು ಹೊದಿಸು; ಹೆಂಚಿನಿಂದ ಮುಚ್ಚು.