See also 2tight
1tight ಟೈಟ್‍
ಗುಣವಾಚಕ
  1. ಬಿಗಿಯಾದ; ಭದ್ರವಾದ; ಬಂದೋಬಸ್ತಾದ: tight joint ಬಿಗಿಯಾದ ಸೇರುವೆ, ಜಾಯಿಂಟು. tight ship ಬಂದೋಬಸ್ತಾದ ಹಡಗು.
  2. (ಗಾಳಿ, ನೀರು, ಮೊದಲಾದವು) ತೂರಲಾಗದ; ಸೇರಲಾಗದ; ಒಳಹೊಗಲಾಗದ (ಮುಖ್ಯವಾಗಿ ಸಮಾಸಪದಗಳ ರಚನೆಯಲ್ಲಿ ಪ್ರಯೋಗ), ಉದಾಹರಣೆಗೆ airtight ಗಾಳಿ ಒಳಹೊಗಲಾಗದ. watertight ನೀರು ಒಳಕ್ಕೆ ತೂರಲಾಗದ.
  3. ಬಿಗಿಯಾಗಿ–ಸೇರಿದ, ಸೇರಿಕೊಂಡ, ಕಚ್ಚಿಕೊಂಡ: tight knots ಬಿಗಿಯಾದ ಗಂಟುಗಳು. cork is too tight ಬಿರಡೆ ಅತಿ ಬಿಗಿಯಾಗಿದೆ.
  4. (ಉಡುಪು ಮೊದಲಾದವುಗಳ ವಿಷಯದಲ್ಲಿ) ಗುತ್ತನಾದ; ಬಿಗಿಯಾದ.
  5. (ನಿಯಂತ್ರಣ ಮೊದಲಾದವು) ನಿಷ್ಠುರವಾದ; ಕಟ್ಟುನಿಟ್ಟಾಗಿ–ವಿಧಿಸಿದ, ಹೊರಿಸಿದ, ಹೇರಿದ.
  6. ಎಳೆದು ಕಟ್ಟಿದ; ಬಿಗಿದು ಕಟ್ಟಿದ; ಸಡಿಲ ಬೀಳದಂತೆ ಬಿಗಿಯ ಮೇಲಿರುವ: tight cord ಬಿಗಿದು ಕಟ್ಟಿದ ಹಗ್ಗ.
  7. (ಆಡುಮಾತು) ಕುಡಿದು ಅಮಲೇರಿದ; ಮತ್ತೇರಿದ.
  8. (ಹಣಕಾಸು, ವಸ್ತುಗಳು, ಮೊದಲಾದವು) ಸುಭವಾಗಿ ಸಿಕ್ಕದ; ಮುಗ್ಗಟ್ಟಿನ.
  9. (ವ್ಯಾಪಾರ, ಹಣದ ಪೇಟೆ) ಬಿಕ್ಕಟ್ಟಿನ; ಮುಗ್ಗಟ್ಟಿನ.
  10. ಬಿಗುಪಿನಿಂದ, ಒತ್ತಡದಿಂದ ಸಾಧಿಸಬೇಕಾದ, ಆಗಬೇಕಾದ, ಮಾಡಬೇಕಾದ: a tight squeeze ಬಿಗುಪಿನ ಹಿಸುಕು.
  11. (ಮುನ್ನೆಚ್ಚರಿಕೆ, ಕಾರ್ಯಕ್ರಮ, ಮೊದಲಾದವು) ಬಿಗಿಯಾದ; ಕಟ್ಟುನಿಟ್ಟಾದ; ಕಠಿಣ; ಚಾಚೂ ತಪ್ಪಲಾಗದ.
  12. (ಆಡುಮಾತು) (ವ್ಯಕ್ತಿಯ ವಿಷಯದಲ್ಲಿ) ಜಿಪುಣ; ಜುಗ್ಗ.
  13. ಕಷ್ಟಕರ; ಕಷ್ಟವನ್ನೊಡ್ಡುವ: a tight situation ಕಷ್ಟದ ಪರಿಸ್ಥಿತಿ.
ಪದಗುಚ್ಛ

tight corner (or place or spot) ಕಷ್ಟದ ಪರಿಸ್ಥಿತಿ; ಪೇಚು; ಇಕ್ಕಟ್ಟು.

See also 1tight
2tight ಟೈಟ್‍
ಕ್ರಿಯಾವಿಶೇಷಣ

ಬಿಗಿಯಾಗಿ; ಭದ್ರವಾಗಿ; ಬಲವಾಗಿ: squeeze it tight ಬಿಗಿಯಾಗಿ ತುರುಕು; ಹಿಸುಕಿ ತುಂಬಉ. hold me tight ನನ್ನನ್ನು ಭದ್ರವಾಗಿ ಹಿಡಿದುಕೊ.