tiger ಟೈಗರ್‍
ನಾಮವಾಚಕ
  1. ಹುಲಿ; ವ್ಯಾಘ್ರ. Figure: tiger
  2. (ಆಡುಮಾತು) (ಆಟದ ಎದುರಾಳಿಯ ವಿಷಯದಲ್ಲಿ) ಹುಲಿಯಂಥ ವ್ಯಕ್ತಿ; ಭಯಂಕರ, ಬಲಿಷ್ಠ–ವ್ಯಕ್ತಿ.
  3. ಷೋದಾ ಮನುಷ್ಯ; ಪುಂಡ; ಹಿಂಸಕ.
  4. (ಬ್ರಿಟಿಷ್‍ ಪ್ರಯೋಗ) (ಪ್ರಾಚೀನ ಪ್ರಯೋಗ) (ಯಮಾನನು ನಡೆಸುವ ಕುದುರೆಗಾಡಿಯಲ್ಲಿ ಹಿಂದುಗಡೆ ನಿಂತುಕೊಳ್ಳುವ) ಪೋಷಾಕು ಕಾಸ್ತಾರ.
  5. (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಮೂರು ಆವೃತ್ತಿಯ ಜಯಕಾರದ ಕೊನೆಯಲ್ಲಿ ಕೂಗುವ ಗರ್ಜನೆ ಕೂಗು
ಪದಗುಚ್ಛ

American tiger ಅಮೆರಿಕದ ಹುಲಿ; ಅಮೆರಿಕದ ಒಂದು ಜಾತಿಯ ಚಿರತೆ.