See also 2tie
1tie ಟೈ
ಕ್ರಿಯಾಪದ
(ವರ್ತಮಾನ ಕೃದಂತ tying).
ಸಕರ್ಮಕ ಕ್ರಿಯಾಪದ
  1. (ಹಗ್ಗ ಮೊದಲಾದವುಗಳಿಂದ) ಕಟ್ಟು; ಕಟ್ಟಿಹಾಕು; ಬಿಗಿ; ಬಂಧಿಸು: tie the dog ನಾಯಿಯನ್ನು ಕಟ್ಟಿಹಾಕು.
  2. (ಪಾದರಕ್ಷೆಯ ದಾರ, ಟೊಪ್ಪಿಗೆಯ ದಾರ, ಮೊದಲಾದವನ್ನು) ಬಿಗಿಯಾಗಿ ಕಟ್ಟು; ಭದ್ರವಾಗಿ ಎಳೆದು ಕಟ್ಟು; ಬಿಗಿಪಡಿಸು.
  3. (ಕೊರಲ ಮುಡಿ, ಅಲಂಕಾರದ ಕೂದಲಪಟ್ಟಿ, ಮೊದಲಾದವನ್ನು) ಗಂಟುಹಾಕು; ಕುಣಿಕೆ ಹಾಕು.
  4. (ಬಣ್ಣ ಹಾಕುವಾಗ ಬಟ್ಟೆಗೆ) ಗಂಟುಹಾಕು; ಕುಣಿಕೆ ಹಾಕು.
  5. (ಮರದ ತೀರು ಮೊದಲಾದವನ್ನು ಅಡ್ಡಪಟ್ಟಿ ಮೊದಲಾದವುಗಳಿಂದ) ಬಿಗಿ; ಕೂಡಿಸು.
  6. (ವ್ಯಕ್ತಿ ಮೊದಲಾದವರನ್ನು ಷರತ್ತು, ಕೆಲಸ, ಮೊದಲಾದವಕ್ಕೆ) ಬದ್ಧಗೊಳಿಸು; ಸ್ವತಂತ್ರವಾಗಿ ಓಡಾಡದಂತೆ ಮಾಡು; ಕಟ್ಟಿಹಾಕು; ಕಟ್ಟುಬೀಳಿಸು: he does not want to be tied down ಅವನು ಕಟ್ಟುಬೀಳಲು ಇಚ್ಫಿಸುವುದಿಲ್ಲ.
  7. (ಸಂಗೀತ)
    1. (ಒಟ್ಟಿಗೆ ನುಡಿಸಬೇಕಾದ ಎರಡು ಸ್ವರಗಳ ಮೇಲೆ) ಕೂಡುಗೆರೆ ಹಾಕು.
    2. ಎರಡು ಸ್ವರಗಳನ್ನು ಒಂದೇ ಅವಿಚ್ಫಿನ್ನ ಸ್ವರದಂತೆ ನುಡಿಸು.
    1. ಆಟದಲ್ಲಿ ಎದುರಾಳಿಯಷ್ಟೇ ಸ್ಕೋರುಗಳನ್ನು ಮಾಡು.
    2. (ಎದುರಾಳಿಯ ಜತೆ, ಒಂದು ಬಹುಮಾನ, ಸ್ಥಾನ, ಮೊದಲಾದವುಗಳಿಗಾಗಿ) ಸಮ ಮಾಡಿಕೊ; ಸಮನಾಗು; ಸಮಾನ ಸ್ಥಾನ ಪಡೆ ( ಅಕರ್ಮಕ ಕ್ರಿಯಾಪದ ಸಹ).
  8. (ಒಬ್ಬನ ಸಾಹಸಕೃತ್ಯ, ಸಾಧನೆ, ಮೊದಲಾದವಕ್ಕೆ) ಸರಿಸಮನಾಗಿ ಸಾಧಿಸು.
ಪದಗುಚ್ಛ
  1. fit to be tied (ಆಡುಮಾತು) ಬಹಳ ಕೋಪಗೊಳ್ಳು, ಸಿಟ್ಟಾಗು.
  2. tie in (with)
    1. ಚೆನ್ನಾಗಿ ಒಪ್ಪುವಂತೆ, ಹೊಂದುವಂತೆ–ಮಾಡು, ಆಗು.
    2. ಸರಿ ಹೊಂದು; ತಾಳೆ ಬೀಳು: history ties in with the fact ಚರಿತ್ರೆ ವಾಸ್ತವಾಂಶಗಳಿಗೆ ತಾಳೆಯಾಗುತ್ತದೆ, (ಹೊಂದಿಕೊಳ್ಳುತ್ತದೆ).
  3. tie up
    1. ಹಗ್ಗದಿಂದ ಕಟ್ಟಿ ಹಾಕು.
    2. (ಸ್ವತಂತ್ರವಾಗಿ, ಮುಕ್ತವಾಗಿ ಕೆಲಸ ಮಾಡಲಾಗದಂತೆ) ನಿರ್ಬಂಧ, ಮಿತಿ, ತಡೆ–ಹಾಕು.
    3. ಆಸ್ತಿಯನ್ನು ಅನ್ಯಥಾ ವಿನಿಯೋಗಿಸದಂತೆ ಉಯಿಲು ಮೊದಲಾದವಲ್ಲಿ ಷರತ್ತು ಹಾಕು.
    4. (ಬಂಡವಾಳ ಮೊದಲಾದವನ್ನು ಕೂಡಲೇ ಬಳಕೆಗೆ ಬರದಂತೆ) ಮೀಸಲಿಡು.
    5. (ಪ್ರಾಣಿಯನ್ನು) ಕಟ್ಟು.
    6. (ಸಾಮಾನ್ಯವಾಗಿ ಕರ್ಮಣಿಯಲ್ಲಿ) (ವ್ಯಕ್ತಿಯ ವೇಳೆ ಮೊದಲಾದವನ್ನು) ಪೂರ್ತಿಯಾಗಿ ಹಿಡಿ.
    7. (ಉದ್ಯಮ, ಕೆಲಸ, ಮೊದಲಾದವನ್ನು) (i) ಪಡೆದುಕೊ; ಗಳಿಸಿಕೊ. (ii) ಪೂರೈಸು; ಮುಗಿಸು; ಸಾಧಿಸು.
    8. (ದೋಣಿಯನ್ನು) ತೀರಕ್ಕೆ, ದಡಕ್ಕೆ–ಕಟ್ಟು.
  4. tie up with = ಪದಗುಚ್ಛ (2 a, b).
See also 1tie
2tie ಟೈ
ನಾಮವಾಚಕ
  1. (ಕಟ್ಟಲು ಬಳಸುವ) ಹಗ್ಗ; ಸರಪಣಿ; ಗಂಟು; ಕಟ್ಟು; ಪಾಶ; ಬಂಧಕ.
  2. = necktie.
  3. (ವ್ಯಕ್ತಿಗಳನ್ನು ಪರಸ್ಪರ ಒಂದುಗೂಡಿಸುವ) ಬಂಧನ; ಸಂಬಂಧ: ties of blood ರಕ್ತ ಸಂಬಂಧ. ties of friendship ಸ್ನೇಹ ಸಂಬಂಧ.
  4. ಕೂಡು–ತೊಲೆ, ದೂಲ; (ಕಟ್ಟಡದ ಹಲವು ಭಾಗಗಳನ್ನು ಒಟ್ಟಿಗೆ ಹಿಡಿದಿರುವ) ತೊಲೆ; ದೂಲ; ಬಿಗಿಮರ; ಪಟ್ಟಿ ಮರ.
  5. (ಸಂಗೀತ) (ಬಿಡದೆ ಯಾ ನಿಲ್ಲಿಸದೆ ನುಡಿಸಬೇಕೆಂಬ ಎರಡು ಸ್ವರಗಳ ಮೇಲೆ ಯಾ ಅಡಿಯಲ್ಲಿ ಹಾಕಿದ) ವಕ್ರವಾದ ಕೂಡುಗೆರೆ.
  6. (ಆಟ ಯಾ ಪಂದ್ಯದಲ್ಲಿ ಸ್ಪರ್ಧಿಗಳಿಗೆ) ಪರಸ್ಪರ–ಸಮತೆ, ಸಮಾನತೆ.
  7. (ಸ್ಪರ್ಧಿಗಳಲ್ಲಿ ಯಾ ಸ್ಪರ್ಧಾಪಕ್ಷಗಳಲ್ಲಿ) ಇಬ್ಬರ ಯಾ ಎರಡರ ನಡುವೆ ನಡೆಯುವ ಪಂದ್ಯ.
  8. (ಅಮೆರಿಕನ್‍ ಪ್ರಯೋಗ) (ದಾರಗಳಿಂದ ಕಟ್ಟಿ ಭದ್ರಪಡಿಸುವಂಥ) ‘ಲೇಸ್‍’–ಪಾದರಕ್ಷೆ, ಬಊಟು, ಮೊದಲಾದವು.
  9. (ಅಮೆರಿಕನ್‍ ಪ್ರಯೋಗ) ರೈಲುಕಂಬಿಯ ಕೆಳಗೆ ಹಾಸಿರುವ ಅಡ್ಡಮರ, ಅಡಿದಿಮ್ಮಿ.
ಪದಗುಚ್ಛ

play, shoot, etc. off a tie (ಆಟ ಸಮವಾಗಿರುವಾಗ) ತೀರ್ಮಾನದ ಆಟವಾಡು.