See also 2tickle
1tickle ಟಿಕ(ಕ್‍)ಲ್‍
ಸಕರ್ಮಕ ಕ್ರಿಯಾಪದ
  1. ಕಚಗುಳಿ ಇಡು; (ಮೈ) ಬಉಳುಗುಟ್ಟಿಸು; ಚಕ್ಕಳಗುಳಿ ಇಡು; ಕಿಕ್ಕಿಳಿ ಮಾಡು: tickle him with a feather ಒಂದು ಗರಿಯಿಂದ ಅವನಿಗೆ ಕಚಗುಳಿ ಇಡು. don’t tickle ಚಕ್ಕಳಗುಳಿ ಇಡಬೇಡಿ.
  2. (ವ್ಯಕ್ತಿಯ ಹಾಸ್ಯ ಪ್ರವೃತ್ತಿ, ಅಹಂಕಾರ, ಜಂಬ, ಮೊದಲಾದವನ್ನು) ಕೆರಳಿಸು; ಕೆಣಕು; ಪ್ರಚೋದಿಸು; ಉದ್ದೀಪಿಸು; ಉಬ್ಬಿಸು: this will tickle his palate ಇದು ಅವನ ಬಾಯಲ್ಲಿ ನೀರೂರಿಸುತ್ತದೆ.
  3. ನಗಿಸು; ವಿನೋದಗೊಳಿಸು; ಖುಷಿಗೊಳಿಸು; ನಗೆಬರಿಸು: I was highly tickled at the idea ಆ ವಿಷಯ ಕೇಳಿ ನನಗೆ ನಗೆಯುಂಟಾಯಿತು.
  4. (ಟ್ರೌಟ್‍ ಮೀನು ಮೊದಲಾದವನ್ನು)ಕೈಯಿಂದ (ಸವರಿ) ಹಿಡಿ.
ಅಕರ್ಮಕ ಕ್ರಿಯಾಪದ

ಚಕ್ಕಳಗುಳಿ ಇಟ್ಟಂತಾಗು; ಬಉಳುಗುಟ್ಟು: my foot tickles ನನ್ನ ಕಾಲು ಚಕ್ಕಳಗುಳಿ ಇಟ್ಟಂತಾಗುತ್ತದೆ.

ಪದಗುಚ್ಛ
  1. tickle (person’s) ribs = tickle ( sakamaRka kirxyApada ೩).
  2. tickled pink (or to death) (ಆಡುಮಾತು) ಸಿಕ್ಕಾಬಟ್ಟೆ ಖುಷಿಯಾಗು; ಸಂತೋಷದಿಂದ ಉಬ್ಬಿಹೋಗು; ನಕ್ಕುನಕ್ಕು ಸುಸ್ತಾಗು, ಸಾಯಿ, ಸಾಯುವಂತಾಗು.
See also 1tickle
2tickle ಟಿಕ(ಕ್‍)ಲ್‍
ನಾಮವಾಚಕ

ಕಚಗುಳಿ; ಚಕ್ಕಳಗುಳಿ.