See also 2ticket
1ticket ಟಿಕಿಟ್‍
ನಾಮವಾಚಕ
  1. (ಒಂದು ಸ್ಥಳವನ್ನು ಪ್ರವೇಶಿಸಲು, ಘಟನೆಯಲ್ಲಿ ಭಾಗವಹಿಸಲು, ಸಾರ್ವಜನಿಕ ವಾಹನದಲ್ಲಿ ಪ್ರಯಾಣ ಮಾಡಲು, ಸಾರ್ವಜನಿಕ ಸೌಕರ್ಯ ಬಳಸಲು, ಮೊದಲಾದವುಗಳಿಗೆ ಬಳಸುವ) ಪ್ರವೇಶ–ಪತ್ರ, ಚೀಟಿ; ಟಿಕೀಟು; ಟಿಕೆಟ್ಟು.
  2. (ಸೈನ್ಯ) ಕೆಲಸದಿಂದ ನಿವೃತ್ತಿ ಯಾ ಬಿಡುಗಡೆ ಚೀಟಿ.
  3. (ಹಡಗಿನ ಚಾಲಕ ಮೊದಲಾದವರ ಹುದ್ದೆಗೆ ಬೇಕಾದ) (ಅರ್ಹತೆಯ) ಯೋಗ್ಯತಾ ಪತ್ರ; ಸರ್ಟಿಹಿಕೇಟು.
  4. (ಬೆಲೆ ಮೊದಲಾದ ವಿವರಗಳನ್ನು ನಮೂದಿಸಿ ಸಾಮಾನಿಗೆ ಕಟ್ಟಿರುವ) ವಿವರಣಾ ಚೀಟಿ, ಟಿಕೆಟ್ಟು.
  5. (ವಾಹನ ಸಂಚಾರಕ್ಕೆ ಸಂಬಂಧಿಸಿದ ಅಪರಾಧಕ್ಕಾಗಿ ಅಧಿಕಾರಿಗಳು ಕೊಡುವ) ತಪ್ಪಿತ ಟಿಕೆಟ್ಟು; ಅಪರಾಧ ಚೀಟಿ: parking ticket (ವಾಹನಾದಿಗಳನ್ನು ನಿಗದಿತ ಸ್ಥಳ ಮೊದಲಾದವುಗಳಲ್ಲಿ ನಿಲ್ಲಿಸದೆ ಹೋದಾಗ ಕೊಡುವ) ನಿಲುಗಡೆ ಅಪರಾಧ ಚೀಟಿ.
  6. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) (ರಾಜಕೀಯ) (ಒಂದು ಪಕ್ಷದವರು ಚುನಾವಣೆಗೆ ನಿಲ್ಲಿಸುವ) ಅಭ್ಯರ್ಥಿಗಳ ಪಟ್ಟಿ.
  7. (ಅಮೆರಿಕನ್‍ ಪ್ರಯೋಗ) (ರಾಜಕೀಯ; ರೂಪಕವಾಗಿ) ಒಂದು ಪಕ್ಷದ ಆದರ್ಶಗಳು ಯಾ ತತ್ತ್ವಗಳು.
ಪದಗುಚ್ಛ
  1. concert ticket ಸಂಗೀತ ಕಚೇರಿಯ ಪ್ರವೇಶ ಚೀಟಿ.
  2. lottery ticket ಲಾಟರಿ ಚೀಟಿ, ಟಿಕೆಟ್ಟು.
  3. railway ticket ರೈಲ್ವೆ (ಪ್ರಯಾಣದ) ಟಿಕೀಟು.
  4. $^1$split the ticket.
  5. the ticket ಅತ್ಯಂತ ಯುಕ್ತವಾದುದು; ಸರಿಯಾದುದು; ಸಮರ್ಪಕವಾದುದು: warm milk and toast is just the ticket for you ಬಿಸಿ ಹಾಲು ಮತ್ತು ಟೋಸ್ಟ್‍ ನಿನಗೆ ಅತ್ಯಂತ ಸಮರ್ಪಕವಾದಂಥವು.
  6. have tickets on oneself (ಆಸ್ಟ್ರೇಲಿಯ)(ಆಡುಮಾತು) ಅಹಂಕಾರಪಡು; ಪ್ರತಿಷ್ಠೆ ತೋರಿಸು.
See also 1ticket
2ticket ಟಿಕಿಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು

(ಮಾರಾಟದ ಸಾಮಾನು ಮೊದಲಾದವುಗಳಿಗೆ) ಬೆಲೆ ಹಚ್ಚು, ಹಾಕು; ಚೀಟಿ ಅಂಟಿಸು.