tiara ಟಿಆರ
ನಾಮವಾಚಕ
  1. (ಚರಿತ್ರೆ) ಪುರಾತನ ಪರ್ಷಿಯನರ ರುಮಾಲು, ತಲೆಯುಡಿಗೆ; ರಾಜರು ಧರಿಸುತ್ತಿದ್ದ ಉದ್ದನೆಯ, ನೆಟ್ಟಗಿರುವ, ಸಾಮಾನ್ಯರು ಧರಿಸುತ್ತಿದ್ದ ಮೊಟಕಾದ, ಮಡಿಚುವ ಶಿರೋವೇಷ್ಟನ.
  2. ಪೋಪ್‍ ಕಿರೀಟ; ಪೋಪನು ಧರಿಸುವ, ಚೂಪಾದ ಹಾಗೂ ಮೂರು ವಲಯಗಳಿಂದ ಆವೃತವಾದ ಕಿರೀಟ, ಮುಡಿ.
  3. (ರೂಪಕವಾಗಿ) ಪೋಪ್‍ನ ಅಧಿಕಾರ, ಪದವಿ.
  4. ಹೆಂಗಸರು ಮುಡಿಯ ಮುಂಭಾಗದಲ್ಲಿ ಧರಿಸುವ ರತ್ನಖಚಿತ ಅಲಂಕಾರದ ಪಟ್ಟಿಯಂಥ ಆಭರಣ; ತಲೆಡಾಬಉ.