See also 2thump
1thump ತಂಪ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ) ಮುಷ್ಟಿಯಿಂದ ಬಲವಾಗಿ–ಗುದ್ದು, ಕುಟ್ಟು, ಬಡಿ.
  2. (ಮುಖ್ಯವಾಗಿ ತನ್ನ ಕಡೆ ಉಳಿದವರ ಗಮನ ಸೆಳೆಯಲು) (ಮೇಜು ಮೊದಲಾದವನ್ನು) ಕೈಯಿಂದ–ಗುದ್ದು, ತಟ್ಟು, ಬಡಿ ( ಅಕರ್ಮಕ ಕ್ರಿಯಾಪದ ಸಹ).
  3. (ಅನೇಕ ವೇಳೆ thump out) (ಪಿಯಾನೋವಿನ ಕೀಲಿ ಮೊದಲಾದವನ್ನು) ಒಡ್ಡೊಡ್ಡಾಗಿ–ಒತ್ತು, ಬಾರಿಸು.
ಅಕರ್ಮಕ ಕ್ರಿಯಾಪದ

ಬಲವಾಗಿ–ಮಿಡಿ, ಹೊಡೆದುಕೊ, ಬಡಿ: my heart was thumping ನನ್ನ ಎದೆ ಹೊಡೆದುಕೊಳ್ಳುತ್ತಿತ್ತು.

See also 1thump
2thump ತಂಪ್‍
ನಾಮವಾಚಕ
  1. ಹೊಡೆತ; ಬಡಿತ; ಗುದ್ದು.
  2. ಗುದ್ದಿನ ಶಬ್ದ, ಸದ್ದು.